ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ವಿರುದ್ಧ ಹಿರಿಯ ನಿರ್ಮಾಪಕ ಕುಮಾರ್ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅಲ್ಲದೇ ಅವರು ಸುದೀಪ್ ಅವರು ಒಂದು ಸಿನಿಮಾಗೆ ತಮ್ಮ ಬಳಿ ಹಣ ಪಡೆದಿದ್ದು, ಆ ಸಿನಿಮಾ ಮಾಡುತ್ತಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ, ಸಾಕಷ್ಟು ನೋವು ಆಗಿದೆ ಎಂದು ಹೇಳಿದ್ದಾರೆ. ತಮ್ಮ ಹಾಗೂ ಸುದೀಪ್ ಅವರ ಜೊತೆಗಿನ ಬಾಂಧವ್ಯ ಚೆನ್ನಾಗಿತ್ತು.
ಸುಮಾರು ಎಂಟು ವರ್ಷದ ಒಂದು ಸಿನಿಮಾ ಮಾಡಬೇಕಿತ್ತು. ಆದರೆ ಸುದೀಪ್ ಅವರು ಇವತ್ತು, ನಾಳೆ ಅಂತ ಹೇಳಿಕೊಂಡು ಬರ್ತಿದ್ದಾರೆ. ನಿಮ್ಮ ಸಿನಿಮಾನೇ ನೆಕ್ಸ್ಟ್ ಅಂತ ಹೇಳಿದ್ರು.ಆದರೆ ಇಲ್ಲಿವರೆಗೆ ಸಿನಿಮಾ ಬಗ್ಗೆ ಮಾತಾಡ್ತಿಲ್ಲ ಎಂದು ಹೇಳಿದ್ದಾರೆ. ಸುದೀಪ್ ಕೈಗೆ ಸಿಗದೇ ಓಡಾಡುತ್ತಿದ್ದಾರೆ ಎಂಬುದಾಗಿ ನಿರ್ಮಾಪಕ ಕುಮಾರ್ ಹೇಳಿದ್ದು, ಈ ಬಗ್ಗೆ ವಾಣಿಜ್ಯ ಮಂಡಳಿಗೆ ಮನವಿ ಪತ್ರವನ್ನು ಬರೆದಿದ್ದೇನೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಯಾರ ಹತ್ತಿರ ಹೋಗಿ ಹೇಳಬೇಕೆಂದು ಕುಮಾರ್ ಅವರು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಚಿತ್ರರಂಗ ಉಳಿಬೇಕು ಅಂದ್ರೆ ನಿರ್ಮಾಪಕರು ಇರಬೇಕು. ಆದರೆ ಅವರಿಗೆ ಹೀಗಾದ್ರೆ ? ನಾನು ಸುದೀಪ್ ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ಅವರು ಸಿನಿಮಾ ಮಾಡ್ತೀನಿ ಅಂತ ಹೇಳಿ ಮಾತಾಡ್ತಿಲ್ಲ. ಫುಲ್ ಸೆಂಟಿಮೆಂಟಲ್ ಆಗಿದೆ. ಬೇರೆಯವರಿಗೆ ದುಡ್ಡು ಕೊಡ್ಸಿದ್ದಾರೆ, ಅವರು ಬಂದು ಹೇಳೋದಕ್ಕೆ ಸಿದ್ದರಿದ್ದಾರೆ. ನಂಬಿಕೆ ಮೇಲೆ ಹಣವನ್ನ ಕೊಟ್ಟಿದ್ದೇನೆ ಆದರೆ ಇವತ್ತು ಸುದೀಪ್ ಕೈಗೆ ಸಿಕ್ತಿಲ್ಲ. ನಾನು ಹಣ ವಾಪಸ್ ಕೇಳ್ತಿಲ್ಲ.
ಕಮಿಟ್ ಆದಂತೆ ನನಗೆ ನಟ ಸುದೀಪ್ ಸಿನಿಮಾ ಮಾಡಿಕೊಡಲಿ ಎಂದು ಕುಮಾರ್ ಆಗ್ರಹಿಸಿದ್ದಾರೆ. ನಂದ ಕಿಶೋರ್ ಮುತ್ತತ್ತಿ ಸತ್ಯರಾಜ್ ಎಂಬ ಟೈಟಲ್ ನೊಂದಿಗೆ ಸ್ಕ್ರಿಪ್ಟ್ ರೆಡಿ ಮಾಡಿದ್ರು. ಇಲ್ಲಿಯವರೆಗೂ ಸುದೀಪ್ ಇದಕ್ಕೆ ಮಾತಾಡಿಲ್ಲ. ಸುದೀಪ್ ಅವರು ಸಿಗದ ಹಿನ್ನೆಲೆಯಲ್ಲಿ ನಾನು ಸುದ್ದಿಗೋಷ್ಠಿಯನ್ನು ಮಾಡಲು ನಿರ್ಧಾರ ಮಾಡಿದೆ. ನಾನು ಅವರ ಜೊತೆ ಚರ್ಚೆ ಮಾಡಲು ಸಿದ್ದವಾಗಿದ್ದೇನೆ. ಸುದೀಪ್ ವಾಣಿಜ್ಯ ಮಂಡಳಿಗೆ ಬರಲಿ ಣಎದುರಿಗೆ ಬಂದು ಮಾತಾಡಲಿ.
ದುಡ್ಡು ಕೊಟ್ಟು ನಾವು ಅವರ ಹತ್ರ ಬೇಡಬೇಕು. ಚೇಂಬರ್ ನಿಂದ ಆರು ಪತ್ರಗಳನ್ನು ಬರೆದಿದ್ದಾರೆ ಆದರೆ ಒಂದು ಪತ್ರಕ್ಕೂ ಅವರು ರಿಪ್ಲೈ ಮಾಡಿಲ್ಲ. ಅಲ್ಲದೇ ಸಾಕ್ಷಿ ಇದೆಯಾ ? ಅವರ ಹತ್ತಿರ ಅಂತ ಸುದೀಪ್ ಹೇಳಿದ್ದಾರೆ. ನಾನು ನಂಬಿಕೆಯಿಂದ ಹಣ ಕೊಟ್ಟೆ. ಸುದೀಪ್ ಈಗ ಸಾಕ್ಷಿಯನ್ನು ಕೇಳ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ ಅವರು ತಮ್ಮ ಬೇಸರ ಮತ್ತು ಅಸಮಾಧಾನವನ್ನು ಹೊರ ಹಾಕಿದ್ದಾರೆ.