ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಗುಂಟೂರು ಖಾರಂ ಸಿನಿಮಾದ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇದೆ. ಈ ಸಿನಿಮಾದ ಅಧಿಕೃತ ಘೋಷಣೆಯಾದಾಗ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ನಾಯಕಿಯರು ಎಂದು ಘೋಷಣೆ ಆಗಿತ್ತು. ನಟಿ ಶ್ರೀಲೀಲಾ ಈ ಸಿನಿಮಾಕ್ಕೆ ಎರಡನೇ ನಾಯಕಿಯಾಗಿದ್ದರು. ಆದರೆ ಈಗ ಹೊಸ ಸುದ್ದಿಗಳು ಹೊರ ಬಂದಿದ್ದು ಅಚ್ಚರಿ ಯನ್ನು ಮೂಡಿಸಿದೆ. ಕೆಲವರಿಗೆ ಇದು ಶಾಕಿಂಗ್ ಕೂಡಾ ಆಗಿದೆ.

ಟಾಲಿವುಡ್ ಅಂಗಳದಿಂದ ಹೊರ ಬಂದಿರುವ ಸುದ್ದಿಗಳ ಪ್ರಕಾರ ನಟಿ ಪೂಜಾ ಹೆಗ್ಡೆ ಗುಂಟೂರು ಖಾರಂ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಯೊಂದು ಈಗ ಸದ್ದು ಮಾಡಿದೆ.
ನಟಿ ಪೂಜಾ ಹೆಗ್ಡೆ ಈ ಸಿನಿಮಾದಿಂದ ಹೊರಬಂದಿರುವುದಕ್ಕೆ ಸ್ಪಷ್ಟ ಕಾರಣ ಏನು ಎನ್ನುವುದರ ಕುರಿತಾಗಿ ಕೂಡಾ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಪೂಜಾ ಹೆಗ್ಡೆ ನಟಿಸಿರುವ ಸಾಲು ಸಾಲು ಸಿನಿಮಾಗಳು ಸೋಲಿನ ಹಾದಿಯನ್ನು ಹಿಡಿದಿದೆ. ಆದರೂ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

ಪ್ರಸ್ತುತ ನಟಿಯು ನಾಲ್ಕೈದು ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗುಂಟೂರು ಖಾರಂ ಸಿನಿಮಾದ ಚಿತ್ರೀಕರಣ ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ ಎಂದು, ಇದರಿಂದ ತಾನು ಡೇಟ್ಸ್ ನೀಡಿರುವ ಬೇರೆ ಸಿನಿಮಾಗಳಿಗೆ ತನ್ನಿಂದ ತೊಂದರೆಯಾಗುವುದು ಬೇಡವೆಂದು ನಟಿ ಈ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಆದರೆ ಇದೇ ವೇಳೆ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿರುವ ಶ್ರೀ ಲೀಲಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಪೂಜಾ ಹೆಗಡೆ ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಲು ಕೇಳಿದ್ದರು ಎನ್ನಲಾಗಿದೆ.
ಆದರೆ ಆ ಬದಲಾವಣೆಗಳು ಆಗದ ಕಾರಣ ನಟಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಹರಿದಾಡಿದೆ. ಪೂಜಾ ಹೆಗ್ಡೆ ಈ ಸಿನಿಮಾದಿಂದ ಹೊರಬಂದ ಹಿನ್ನೆಲೆಯಲ್ಲಿ, ಇಷ್ಟು ದಿನ ಎರಡನೇ ನಾಯಕಿಯಾಗಿದ್ದ ನಟಿ ಶ್ರೀಲೀಲಾ ಅವರನ್ನೇ ಈಗ ಮುಖ್ಯ ನಾಯಕಿಯನ್ನಾಗಿ ಮಾಡಲಾಗಿದ್ದು, ಶ್ರೀ ಲೀಲಾ ಮಾಡುತ್ತಿದ್ದ ಪಾತ್ರಕ್ಕೆ ಬೇರೊಬ್ಬ ನಟಿಯನ್ನು ಕರೆತರಲಾಗುವುದು ಎನ್ನಲಾಗಿದೆ.