ಆಗಾಗ ಕೆಲವೊಂದು ಸುದ್ದಿಗಳು ಹೊರ ಬಂದಾಗ. ಅಚ್ಚರಿಯನ್ನು ಮೂಡಿಸುವ ಜೊತೆಗೆ ಶಾಕಿಂಗ್ ಸಹಾ ಆಗಿರುತ್ತದೆ. ಇದೀಗ ಅಂತಹುದೊಂದು ಘಟನೆಯಲ್ಲಿ ತನ್ನ 4 ಜನ ಮಕ್ಕಳೊಂದಿಗೆ ಭಾರತಕ್ಕೆ ಬಂದು, ಅಕ್ರಮವಾಗಿ ಗ್ರೇಟರ್ ನೋಯ್ಡಾದಲ್ಲಿ (Greater Noida) ನೆಲೆಸಿದ್ದಂತಹ ಮಹಿಳೆಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು, ಈ ಸುದ್ದಿ ಈಗ ಎಲ್ಲರಿಗೂ ಅಚ್ಚರಿಯನ್ನು ಮೂಡಿಸುವುದರ ಜೊತೆಗೆ ಶಾಕಿಂಗ್ ಸಹಾ ಆಗಿದೆ. ಇನ್ನು ಈ ಮಹಿಳೆ ಯಾರು ? ಬಂದಿದ್ದು ಎಲ್ಲಿಂದ ಎನ್ನುವುದು ಇನ್ನಷ್ಟು ಅಚ್ಚರಿಯನ್ನು ಮೂಡಿಸಿದೆ.
ಹೌದು, ಈ ಮಹಿಳೆ ಪಾಕಿಸ್ತಾನ ಮೂಲದವರಾಗಿದ್ದಾರೆ. ಈಕೆ ತನ್ನ ಜೊತೆ ಪಬ್ ಜಿ (PUBG) ಆಟವನ್ನು ಆಡುತ್ತಿದ್ದ ನೊಯ್ಡಾ ಮೂಲದ ವ್ಯಕ್ತಿಯನ್ನು ಭೇಟಿ ಮಾಡಲು ಭಾರತಕ್ಕೆ (India) ಬಂದು, ಇಲ್ಲೇ ನೆಲೆಸಿದ್ದಾಳೆ. ಈ ಹಿನ್ನೆಲೆಯಲ್ಲಿ ಈಗ ಪೊಲಿಸರು ಮಹಿಳೆಯನ್ನು ಆಕೆಯ ಮಕ್ಕಳ ಜೊತೆಗೆ ಹಾಗೂ ಆಕೆಯ ಗೆಳೆಯನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗ್ರೇಟರ್ ನೋಯ್ಡದ ಪೋಲಿಸ್ ಉಪಾಯುಕ್ತ ಸಾದ್ ಮಿಯಾ ಅವರು ಪಾಕಿಸ್ತಾನಿ ಮಹಿಳೆ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಈ ಮಹಿಳೆಯು ವಯಸ್ಸು ಸುಮಾರು 20 ಎನ್ನಲಾಗಿದ್ದು, ಪಬ್ ಜಿ ಆಟದ ಮೂಲಕ ಭಾರತದ ನೊಯ್ಡಾ ಮೂಲದ ವ್ಯಕ್ತಿಯೊಂದಿಗೆ ಪರಿಚಯ ಮಾಡಿಕೊಂಡಿದ್ದಾರೆ. ಅವರ ಪರಿಚಯ ಸ್ನೇಹಕ್ಕೆ ತಿರುಗಿದ್ದು ನಂತರ ಆತನನ್ನು ಭೇಟಿ ಮಾಡಲು ಆಕೆ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳನ್ನು ಕರೆದುಕೊಂಡು ಭಾರತಕ್ಕೆ ಬಂದಿದ್ದಾರೆ. ಸದ್ಯಕ್ಕೆ ಪೋಲಿಸರು ಈ ಮಹಿಳೆ ಮತ್ತು ಆಕೆಯ ಗೆಳೆಯನ ತನಿಖೆ ನಡೆಸಲಾಗುತ್ತಿದೆ.