ಬಹುಭಾಷಾ ಸಿನಿಮಾ ಆಗಿ ಸಿದ್ಧವಾಗಿರುವ ತಮಿಳಿನ ಸ್ಟಾರ್ ನಟ ರಜನಿಕಾಂತ್ ಮತ್ತು ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮುಂದಿನ ವಾರ ತೆರೆಗೆ ಬರಲು ಸಜ್ಜಾಗಿರುವ ಬಹು ನಿರೀಕ್ಷಿತ ಜೈಲರ್ (Jailer) ಸಿನಿಮಾದ ವಿರುದ್ಧ ಮಲಯಾಳಂ (Malayalam) ನಿರ್ದೇಶಕರೊಬ್ಬರು ಬೀದಿಗೆ ಇಳಿದು ಪ್ರತಿಭಟನೆಯನ್ನು (Protest) ಮಾಡುವ ಮೂಲಕ ದೊಡ್ಡ ಸುದ್ದಿಯಾಗಿದ್ದಾರೆ.
ಜೈಲರ್ ಸಿನಿಮಾವನ್ನು ಮಲೆಯಾಳಂ ನಲ್ಲಿ ಬಿಡುಗಡೆ ಮಾಡುವ ಮೊದಲು ಅದರ ಟೈಟಲ್ ಅನ್ನು ಬದಲಾಗಿಸುವಂತೆ ನಿರ್ದೇಶಕ ಆಗ್ರಹಿಸುತ್ತಿದ್ದಾರೆ.
ಮಲಯಾಳಂ ಸಿನಿಮಾ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಒಂದು ಸಿನಿಮಾ ಮಾಡಿದ್ದು, ಅದು ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದೇ ವೇಳೆ ರಜನೀಕಾಂತ್ ಅವರ ಜೈಲರ್ ಸಹಾ ಮಲಯಾಳಂನಲ್ಲಿ ರಜನಿ ಬಿಡುಗಡೆ ಆಗುತ್ತಿದ್ದು ಎರಡು ಸಿನಿಮಾಗಳ ಟೈಟಲ್ ಗೊಂದಲ ಮೂಡಿಸಿದೆ. ಆದ್ದರಿಂದಲೇ ಸಕ್ಕಿರ್ ರಜನೀಕಾಂತ್ ಅವರ ಸಿನಿಮಾ ಟೈಟಲ್ ಅನ್ನು ಮಲಯಾಳಂ ನಲ್ಲಿ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿಯೊಂದನ್ನು ಮಾಡಿಕೊಂಡಿದ್ದರು.
ಆದರೆ ನಿರ್ದೇಶಕ ಮಾಡಿಕೊಂಡ ಮನವಿಗೆ ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಟೈಟಲ್ ಬದಲಿಸುವುದು ಸಾಧ್ಯವಿಲ್ಲ ಎಂದು ಉತ್ತರವನ್ನು ಬರೆದಿತ್ತು. ಇದರಿಂದ ಬೇಸತ್ತ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲನ್ನು ಏರಿದ್ದರು. ಜೊತೆ ಜೊತೆಗೆ ರಜನೀಕಾಂತ್ ನಟನೆಯ ಜೈಲರ್ ಸಿನಿಮಾ ಬಿಡುಗಡೆ ದಿನವೇ ತಮ್ಮ ಸಿನಿಮಾವನ್ನು ದಿನವೇ ರಿಲೀಸ್ ಮಾಡುವುದಾಗಿ ಹೇಳಿದ್ದವರು ಈಗ ಮಲಯಾಳಂ ಫಿಲ್ಮ್ ಚೇಂಬರ್ ವಿರುದ್ಧ ಪ್ರತಿಭಟನೆಗೆ ಕುಳಿತಿದ್ದಾರೆ.