ಆದಿಪುರುಷ್ ಸಿನಿಮಾದ ಸಂಭಾಷಣೆಗಳು ಸೃಷ್ಟಿಸಿರುವ ವಿವಾದಗಳು ಅಷ್ಟಿಷ್ಟಲ್ಲ. ಪುರಾಣ ಪಾತ್ರಗಳ ಬಾಯಿಂದ ಟಪೋರಿ ಡೈಲಾಗ್ ಗಳನ್ನು ಕೇಳಿದ ಜನರು ಸಿಟ್ಟಾಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸಿನಿಮಾ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಸಂಭಾಷಣೆಗಳ ವಿಚಾರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದೆ. ಈ ವೇಳೆ ಕೋರ್ಟ್ ಪದೇ ಪದೇ ಹಿಂದುಗಳ ತಾಳ್ಮೆಯನ್ನು ಅವರ ಸಹಿಷ್ಣುತೆಯ ಮಟ್ಟವನ್ನು ಪರೀಕ್ಷೆ ಯಾಕೆ ಮಾಡ್ತೀರಿ? ಎಂದಯ ಪ್ರಶ್ನೆ ಮಾಡಿದೆ.
ಅದೃಷ್ಟವಶಾತ್ ಅವರು (ಹಿಂದುಗಳು) ಕಾನೂನನ್ನು ಉಲ್ಲಂಘನೆ ಮಾಡಿಲ್ಲ ಎನ್ನುವುದು ಒಳ್ಳೆಯ ವಿಚಾರವಾಗಿದೆ. ಭಗವಾನ್ ಶ್ರೀ ರಾಮ ಮತ್ತು ಹನುಮಂತ ಸೇರಿದಂತೆ ಧಾರ್ಮಿಕ ಪಾತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಜನರ ಮುಂದೆ ಇರಿಸಿರುವುದಕ್ಕೆ ಕೋರ್ಟ್ ಸಿನಿಮಾದ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದೆ. ಚಿತ್ರದಲ್ಲಿ ಸಂಭಾಷಣೆ ಬರೆದಿರುವ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ.
ಮನೋಜ್ ಮುಂತಾಶಿರ್ ಅವರಿಗೆ ನೋಟಿಸ್ ಜಾರಿ ಮಾಡುವುದರ ಜೊತೆಗೆ ವಾರದೊಳಗೆ ಉತ್ತರಿಸುವಂತೆ ಕೋರ್ಟ್ ಸೂಚನೆಯನ್ನು ನೀಡಿದೆ. ಸೌಮ್ಯವಾಗಿ ಇರುವವರನ್ನು ಮಾತ್ರವೇ ನಾವು ನಿಗ್ರಹಿಸಬೇಕೆ? ಹಾಗೆ ಎನ್ನುವುದಾದರೆ, ಇದು ಧರ್ಮದ ವಿಚಾರವೆಂದು ಹೇಳಲು ಖುಷಿಯಾಗುತ್ತದೆ ಏಕೆಂದರೆ ಹಿಂದೂ ಧರ್ಮದವರು ಯಾವುದೇ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿಲ್ಲ. ಅದಕ್ಕಾಗಿ ನಾವು ಅವರಿಗೆ ಧನ್ಯವಾದಗಳನ್ನು ಹೇಳಬೇಕಿದೆ.
ಸಿನಿಮಾ ಹಾಲ್ ಗೆ ನುಗ್ಗಿ ಜನರನ್ನು ಹೊರ ಹಾಕಿದ ಮತ್ತು ಇಡೀ ಸಿನಿಮಾ ಥಿಯೇಟರ್ ಗಳನ್ನೇ ಮುಚ್ಚಿದ ಪ್ರಕರಣಗಳನ್ನು ನಾವು ನೋಡಿದ್ದೇವೆ. ಈ ಬಾರಿಯೂ ಇದೇ ರೀತಿ ಆಗಬಹುದಿತ್ತೆಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರ ಪೀಠವು ಕೇಂದ್ರ ಚಲನ ಚಿತ್ರ ಮಂಡಳಿಗೆ ಹೇಳಿದೆ. ಆದಿಪುರುಷ್ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಪ್ರಮಾಣಪತ್ರ ನೀಡುವಾಗ ಇದೆಲ್ಲವನ್ನೂ ಗಮನಿಸಿಲ್ಲವೇ ಎಂದು ಪ್ರಶ್ನೆ ಮಾಡಲಾಗಿದೆ.