ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರು ತಮಿಳಿನಲ್ಲಿ ನಟ ರಜನೀಕಾಂತ್ ಅವರ 169 ನೇ ಸಿನಿಮಾ ಜೈಲರ್ ನಲ್ಲಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ತಮಿಳಿನ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣವನ್ನು ಹಚ್ಚಿದ್ದಾರೆ. ಜೈಲರ್ ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಇದೀಗ ಸಿನಿಮಾ ಕುರಿತಾದ ಒಂದು ಹೊಸ ಅಪ್ಡೇಟ್ ಹೊರ ಬಂದಿದೆ.
ಹೌದು, ಜೈಲರ್ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾ ಬಹಳ ವಿಶೇಷವಾಗಿದೆ. ಏಕೆಂದರೆ ಇದರಲ್ಲಿ ಕನ್ನಡದ ಮತ್ತು ತಮಿಳಿನ ಸ್ಟಾರ್ ನಟರು ಇದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ದಕ್ಷಿಣದ ದಿಗ್ಗಜ ನಟರೊಂದಿಗೆ ಬಾಲಿವುಡ್ (Bollywood) ನಟರು ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದ ಒಂದು ಝಲಕ್ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಅಭಿಮಾನಿಗಳಿಗೆ ಅದು ಖುಷಿಯನ್ನು ನೀಡಿತ್ತು.
ಈಗ ಅದರ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರತಂಡವು ಬಹಳ ಖುಷಿಯಿಂದ ಈ ಕ್ಷಣವನ್ನು ಸಂಭ್ರಮಿಸಿದೆ. ಜೈಲರ್ ಸಿನಿಮಾ ಪೂರ್ಣಗೊಂಡ ಮಾಹಿತಿಯನ್ನು ಸಿನಿಮಾ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಫೋಟೋ ಸಹಿತ ಶೇರ್ ಮಾಡುತ್ತಾ,. ಶೂಟಿಂಗ್ ಮುಗಿದಿದೆ ಮತ್ತೆ ಥಿಯೇಟರ್ ನಲ್ಲಿ ಭೇಟಿಯಾಗೋಣ ಎಂದು ಪೋಸ್ಟ್ ಬರೆದುಕೊಂಡಿದೆ.
- ವಿಚ್ಛೇದನದ ಸುದ್ದಿ ಹರಡಿದವರ ಕೆನ್ನೆಗೆ ಬಾರಿಸುವಂತೆ ರಿಪ್ಲೈ ಕೊಟ್ಟ ನಟಿ ಆಸಿನ್: ನಟಿಯ ಉತ್ತರಕ್ಕೆ ಖುಷಿ ಪಟ್ಟ ನೆಟ್ಟಿಗರು
- ಗಟ್ಟಿ ಚಿತ್ರಕತೆ ಜೊತೆಗೆ ಮೈ ಜುಮೆನ್ನಿಸುವ ಮಾಸ್. ಭೈರತಿ ರಣಗಲ್ ಶಿವ ತಾಂಡವ.. ಫಿಲಂ ರಿವ್ಯೂ.
- ಹಿರಿಯ ನಟಿಯ ಸೆರಗು ಜಾರಿಸಲು ಬಯಸಿದ್ದ ನಿರ್ದೇಶಕ: ಹೇಮಾ ಮಾಲಿನಿ ತಿಳಿಸಿದ ಕರಾಳ ಸತ್ಯ
- ಅಲ್ಲು ಅರ್ಜುನ್ ಜೊತೆ ನಟಿಸೋದಿಲ್ಲ ಎಂದ ಶ್ರೀಲೀಲಾ! ನಟಿಯ ನಿರ್ಧಾರಕ್ಕೆ ಟಾಲಿವುಡ್ ಶಾಕ್ !!