ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರು ತಮಿಳಿನಲ್ಲಿ ನಟ ರಜನೀಕಾಂತ್ ಅವರ 169 ನೇ ಸಿನಿಮಾ ಜೈಲರ್ ನಲ್ಲಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ತಮಿಳಿನ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣವನ್ನು ಹಚ್ಚಿದ್ದಾರೆ. ಜೈಲರ್ ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಇದೀಗ ಸಿನಿಮಾ ಕುರಿತಾದ ಒಂದು ಹೊಸ ಅಪ್ಡೇಟ್ ಹೊರ ಬಂದಿದೆ.
ಹೌದು, ಜೈಲರ್ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾ ಬಹಳ ವಿಶೇಷವಾಗಿದೆ. ಏಕೆಂದರೆ ಇದರಲ್ಲಿ ಕನ್ನಡದ ಮತ್ತು ತಮಿಳಿನ ಸ್ಟಾರ್ ನಟರು ಇದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ದಕ್ಷಿಣದ ದಿಗ್ಗಜ ನಟರೊಂದಿಗೆ ಬಾಲಿವುಡ್ (Bollywood) ನಟರು ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದ ಒಂದು ಝಲಕ್ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಅಭಿಮಾನಿಗಳಿಗೆ ಅದು ಖುಷಿಯನ್ನು ನೀಡಿತ್ತು.
ಈಗ ಅದರ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರತಂಡವು ಬಹಳ ಖುಷಿಯಿಂದ ಈ ಕ್ಷಣವನ್ನು ಸಂಭ್ರಮಿಸಿದೆ. ಜೈಲರ್ ಸಿನಿಮಾ ಪೂರ್ಣಗೊಂಡ ಮಾಹಿತಿಯನ್ನು ಸಿನಿಮಾ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಫೋಟೋ ಸಹಿತ ಶೇರ್ ಮಾಡುತ್ತಾ,. ಶೂಟಿಂಗ್ ಮುಗಿದಿದೆ ಮತ್ತೆ ಥಿಯೇಟರ್ ನಲ್ಲಿ ಭೇಟಿಯಾಗೋಣ ಎಂದು ಪೋಸ್ಟ್ ಬರೆದುಕೊಂಡಿದೆ.
- ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಔಟ್: ನವ ನಟಿಗೆ ಮಣೆ ಹಾಕಿದ ಪ್ರಿನ್ಸ್ ಮಹೇಶ್ ಬಾಬು
- ಅಂದು ಕೊಟ್ಟ ಭರವಸೆಯಂತೆ ನಡೆಯಲಿಲ್ಲ ರಾಧಿಕಾ ಪಂಡಿತ್: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಕೊಟ್ಟಿದ್ದ ಭರವಸೆ ಏನು?
- ದಕ್ಷಿಣದ ಈ ನಟರನ್ನು ಹಾಡಿ ಹೊಗಳಿದ ತಮನ್ನಾ: ನಟಿ ಸಭ್ಯರು, ಸಂಸ್ಕಾರವಂತರೆಂದು ಹೇಳಿದ್ದು ಯಾರ ಬಗ್ಗೆ?
- Yash 19 ತಡ ಆಗ್ತಾ ಇರೋದ್ಯಾಕೆ? ಜನ ಫ್ರೀಯಾಗಿ ನೋಡೋಲ್ಲ: ಸ್ವತಃ ರಾಕಿಂಗ್ ಸ್ಟಾರ್ ಯಶ್ ಕೊಟ್ರು ಉತ್ತರ !