ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಾಯಕನಾಗಿದ್ದ ಪುಷ್ಪ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿನ ಒಂದು ವಿಶೇಷ ಹಾಡಿಗೆ ಸಮಂತಾ (Samantha) ಹೆಜ್ಜೆ ಹಾಕಿದ್ದರು. ಆ ಹಾಡು ಇಡೀ ದೇಶದಲ್ಲೊಂದು ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವೇ ಅಲ್ಲದೇ ಸಿನಿಮಾದ ನಾಯಕಿಗಿಂತ ಹೆಚ್ಚು ಸದ್ದನ್ನು ಮಾಡಿದ್ದು ಸಮಂತಾ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಈಗ ಪುಷ್ಪ 2 (Pushpa 2) ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ವೇಳೆ ನಿರ್ದೇಶಕ ಸುಕುಮಾರ್ (sukumar) ಈ ಸಿನಿಮಾದಲ್ಲಿ ಸಹಾ ಒಂದು ಐಟಂ ಸಾಂಗ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ತೆಲುಗು ಸಿನಿಮಾ ರಂಗದಲ್ಲಿ ಪ್ರಸ್ತುತ ಬಹುಬೇಡಿಕೆಯ ನಟಿಯಾಗಿ, ಬಹುತೇಕ ಸ್ಟಾರ್ ನಟರುಗಳ ಜೊತೆ ಸಿನಿಮಾ ಮಾಡುತ್ತಿರುವ ನಟಿ ಶ್ರೀಲೀಲಾ (Sreeleela) ಅವರನ್ನು ಸುಕುಮಾರ್ ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ.
ಇದೇ ವೇಳೆ ನಟಿ ಶ್ರೀಲೀಲಾ ತಾನು ಹೀರೋಯಿನ್ ಆಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದರೆ ಕೆರಿಯರ್ ಮೇಲೆ ಅದು ಪರಿಣಾಮ ಬೀಳಬಹುದು ಎನ್ನುವ ಕಾರಣಕ್ಕೆ ಈ ಹಾಡಿನಲ್ಲಿ ಹೆಜ್ಜೆ ಹಾಕಲು ಒಪ್ಪಿಕೊಂಡಿಲ್ಲ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡಿ ಚರ್ಚೆಗೆ ಕಾರಣವಾಗಿದೆ. ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಲು ಶ್ರೀಲೀಲಾ ನೋ ಎಂದಿರುವುದು ಅಚ್ಚರಿಯನ್ನು ಮೂಡಿಸಿದೆ.