ಆಗಾಗ ರಾಜ್ಯ ರಾಜಕೀಯ ಹಾಗೂ ವಾತಾವರಣದಲ್ಲಿ ಆಗುವ ಬದಲಾವಣೆಗಳು, ವಿಶ್ವದ ವಿದ್ಯಮಾನಗಳ ಬಗ್ಗೆ ಭವಿಷ್ಯವಾಣಿಯನ್ನು ನುಡಿಯುವ ಕೋಡಿ ಮಠದ ಶ್ರೀಗಳಾದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಈಗ ಮತ್ತೊಂದು ಭೀಕರವಾದ ಭವಿಷ್ಯವಾಣಿ ನುಡಿದಿದ್ದಾರೆ. ಹೌದು, ಶ್ರೀ ಗಳು ನಮ್ಮ ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಳಪ್ರಳಯವಾಗಲಿದೆ ಎಂದಿದ್ದು, ಪ್ರಕೃತಿ ಮುನಿದು ಸರಿಯಾಗುತ್ತದೆ ಎಂದು ಹೇಳಿದ್ದಾರೆ. ಶ್ರೀಗಳು ಹುಬ್ಬಳ್ಳಿಯಲ್ಲಿ ಮಾತನಾಡುವ ವೇಳೆ ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ.
ವಿಪರೀತವಾದ ಜಲಪ್ರಳಯದಿಂದ ಜಾಗತಿಕ ಮಟ್ಟದಲ್ಲಿ ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗುತ್ತವೆ ಎಂದಿದ್ದಾರೆ. ಅದಲ್ಲದೇ ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣಕ್ಕೆ ಗುರಿಯಾಗುತ್ತಾರೆ. ಬೇರೆಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮವನ್ನು ಬೀರಲಿದೆ. ವಿಜಯ ದಶಮಿಯಿಂದ ಸಂಕ್ರಾತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ ಎಂದಿದ್ದಾರೆ. ಹಾಗೆ ಮಾತು ಮುಂದುವರೆಸಿದ ಅವರು ಆಳುವವರು ಅರಿತುಕೊಳ್ಳಬೇಕಾಗಿದೆ ಇಲ್ಲದೇ ಹೋದಲ್ಲಿ ಅಪಾಯವು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಇದೊಂದು ಬಹಳ ದೊಡ್ಡ ದುರ್ಘಟನೆ ಆಗಲಿದ್ದು, ಕರುನಾಡಿಗೆ ಕೆಲವು ಆಪತ್ತುಗಳಿವೆ. ಕೆಲವು ಸಾವು ನೋವು ಸಂಭವಿಸುತ್ತವೆ ಎಂದು ಸಹಾ ಹೇಳಿದ್ದಾರೆ. ಗೌರಿಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು. ಮಳೆ ಬೆಳೆ ತಲ್ಲಣಗೊಂಡಿತು. ಜನರು ತೊಂದರೆಗೆ ಒಳಗಾಗುವರು ಎಂದ ಶ್ರೀಗಳು ನಾನು ಹೇಳಿದಾಗ ಒಂದು ಘಟನೆ ಆಗಿಯೇ ಆಗುತ್ತದೆ ಆದರೆ ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದಿದ್ದಾರೆ.