ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿಮಾ ರಂಗ ವಿಶೇಷವಾಗಿ ಟಾಲಿವುಡ್ ನ ಸ್ಟಾರ್ ನಟಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ತೆಲುಗಿನ ಯುವ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಬಾಲಿವುಡ್ ಗೂ ಎಂಟ್ರಿ ನೀಡಿದ್ದಾರೆ. ಇನ್ನು ಇತ್ತೀಚಿಗೆ ಟಾಲಿವುಡ್ ನಲ್ಲಿ ಎಲ್ಲಾ ಸ್ಟಾರ್ ನಟಿಯರನ್ನು ಹಿಂದಿಕ್ಕಿ ನಟಿ ಶ್ರೀಲೀಲಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆಯುತ್ತಿದ್ದಾರೆ. ಬರೋಬ್ಬರಿ ಎಂಟರಿಂದ ಒಂಬತ್ತು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ಶ್ರೀಲೀಲಾ ನಟಿಸುತ್ತಿದ್ದಾರೆ. ಶ್ರೀಲೀಲಾ ಬೇರೆಲ್ಲಾ ನಟಿಯರಿಗೆ ಗಟ್ಟಿ ಸ್ಪರ್ಧೆಯನ್ನು ಕೊಡ್ತಾ ಇದ್ದಾರೆ.

ಈಗ ಇವೆಲ್ಲವುಗಳ ನಡುವೆ ಒಂದು ಹೊಸ ವಿಷಯ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ನಟಿ ಶ್ರೀಲೀಲಾ ಕೈತಪ್ಪಿದ ಒಂದು ಸಿನಿಮಾ ನಟಿ ರಶ್ಮಿಕಾ ಅವರ ಅದೃಷ್ಟ ಬದಲಾಯಿಸಿ ಬಿಟ್ಟಿತಾ? ಅನ್ನೋ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಇಂತದೊಂದು ಚರ್ಚೆ ಆರಂಭ ಆಗೋಕೆ ಕಾರಣ ಆಗಿದ್ದು ತೆಲುಗಿನ ಯುವ ನಟ ನಾಗ ಶೌರ್ಯ. ನಟ ನಾಗಶೌರ್ಯ ತಮ್ಮ ರಂಗಬಲಿ ಸಿನಿಮಾದ ಪ್ರಚಾರದ ವೇಳೆ ಹೇಳಿದ ವಿಚಾರವೊಂದು ಹೊಸ ಹಲ್ ಚಲ್ ಉಂಟು ಮಾಡಿದೆ.

ನಟಿ ರಶ್ಮಿಕಾ ಟಾಲಿವುಡ್ ಗೆ ಎಂಟ್ರಿ ನೀಡಿದ್ದು ಚಲೋ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ನಾಗಶೌರ್ಯ ನಾಯಕನಾಗಿದ್ದರು. ಚಲೋ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದಿತ್ತು. ಅಲ್ಲದೇ ಈ ಸಿನಿಮಾ ನಂತರ ರಶ್ಮಿಕಾಗೆ ಸಹಾ ಅವಕಾಶಗಳು ಅರಸಿ ಬಂದವು. ಆದರೆ ಇಲ್ಲಿ ವಿಷಯ ಏನೆಂದರೆ ಈ ಸಿನಿಮಾಕ್ಕೆ ಮೊದಲು ನಾಯಕಿಯಾಗಿ ಆಯ್ಕೆ ಆಗಿದ್ದವರು ನಟಿ ರಶ್ಮಿಕಾ ಅಲ್ಲ ಎಂದು ನಾಗಶೌರ್ಯ ಹೇಳಿದ್ದಾರೆ.
ನಟ ನಾಗಶೌರ್ಯ ಮಾತನಾಡುತ್ತಾ, ಚಲೋ ಸಿನಿಮಾಕ್ಕೆ ಮೊದಲು ಆಯ್ಕೆಯಾಗಿದ್ದು ನಟಿ ಶ್ರೀಲೀಲಾ ಆದರೆ ಅವರು ಕಾರಣಾಂತರಗಳಿಂದ ಆ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ. ಆ ಅವಕಾಶವನ್ನು ರಶ್ಮಿಕಾ ಸದುಪಯೋಗ ಪಡಿಸಿಕೊಂಡರು ಎನ್ನುವ ಮಾತನ್ನು ನಾಗಶೌರ್ಯ ಹೇಳಿದ್ದಾರೆ. ಈ ಮೂಲಕ ಶ್ರೀಲೀಲಾ ನೋ ಹೇಳಿದ ಸಿನಿಮಾ ರಶ್ಮಿಕಾ ಅದೃಷ್ಟ ಬದಲಿಸಿತು ಎಂದರೆ ಅದು ತಪ್ಪಾಗಲಾರದು.