Home » ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಟ್ಟ ಹೆಸರು INDIA : ಏನಿದರ ಅರ್ಥ??

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಟ್ಟ ಹೆಸರು INDIA : ಏನಿದರ ಅರ್ಥ??

by Suddi Mane
0 comment

ಮುಂಬರಲಿರುವಂತಹ ಲೋಕಸಭೆಯ ಚುನಾವಣೆಯಲ್ಲಿ ಹೇಗಾದರೂ ಸರಿ ಬಿಜೆಪಿಗೆ ಸೋಲುಣಿಸಬೇಕೆಂದು ಈಗಾಗಲೇ ವಿರೋಧ ಪಕ್ಷಗಳು ತಮ್ಮ ತಂತ್ರಗಾರಿಕೆಯನ್ನು ಆರಂಭಿಸಿವೆ. ಈಗ ಈ ಪಕ್ಷಗಳೆಲ್ಲವೂ ಸೇರಿ ತಮ್ಮ ಮೈತ್ರಿಕೂಟವನ್ನು ‘INDIA’ ಎಂದು ಕರೆದುಕೊಂಡಿವೆ. ಹಾಗಾದರೆ ಮೈತ್ರಿಕೂಟಕ್ಕೆ ಇಟ್ಟಿರುವ ಈ ಹೆಸರಿನ ಹಿಂದೆ ಇರುವ ಅರ್ಥವೇನು? ಎನ್ನುವುದು ಈಗ ಎಲ್ಲರ ಪ್ರಶ್ನೆಯಾಗಿದ್ದು ಅದಕ್ಕೆ ಉತ್ತರ ಇಲ್ಲಿದೆ.

INDIA ಎಂದರೆ I–Indian N–National D–Developmental I–Inclusive A–Alliance (ಇಂಡಿಯನ್‌ ನ್ಯಾಷನಲ್‌ ಡೆವೆಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌) ಎನ್ನುವುದರ ಸಂಕ್ಷಿಪ್ತ ರೂಪವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 26 ಪಕ್ಷಗಳೊಟ್ಟಿಗೆ ನಡೆಯುತ್ತಿರುವ ಸಭೆಗೆ ಎಲ್ಲಾ 26 ಪಕ್ಷಗಳು ಭಾಗಿಯಾಗಿದ್ದು ಈ ಸಭೆಯಲ್ಲಿ ತಮ್ಮ ಮೈತ್ರಿಕೂಟಕ್ಕೆ ‘INDIA’ ಹೆಸರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ.

ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ INDIA ಹೆಸರನ್ನು ಘೋಷಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿ ಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ಹೆಸರಿಡಲಾಗಿದೆ ಎಂದಿದ್ದು, ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ಸಹಾ ತಮ್ಮ ಒಪ್ಪಿಗೆಯನ್ನು ಸೂಚಿಸಿವೆ ಎಂದು ಅವರು ಹೇಳಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದು, ನಮ್ಮದು ಬಿಜೆಪಿ ಸಿದ್ಧಾಂತದ ವಿರುದ್ಧದ ಹೋರಾಟ ಎಂದಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies