ಬಾಲಿವುಡ್ ನ ಡ್ರಾಮಾ ಕ್ವೀನ್ ಖ್ಯಾತಿಯ ನಟಿ ರಾಖಿ ಸಾವಂತ್ ಮಾದ್ಯಮಗಳಿಂದ ದೂರು ಇರುವುದು ಅಸಾಧ್ಯವೇ ಸರಿ. ಒಂದಲ್ಲಾ ಒಂದು ವಿಚಾರವಾಗಿ ರಾಖಿ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದು ಈ ನಟಿಯ ವಿಶೇಷವಾಗಿದೆ. ತಾನು ನೀಡುವ ಹೇಳಿಕೆಗಳಿಂದಾಗಿಯೂ ಚರ್ಚೆಗಳನ್ನು ಹುಟ್ಟು ಹಾಕುವ ಈ ನಟಿಯು ಇತ್ತೀಚಿನ ದಿನಗಳಲ್ಲಿ ತಮ್ಮ ಖಾಸಗಿ ಬದುಕಿನ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ರಾಖಿಯ ಮದುವೆ ವಿಚಾರ ಸಿಕ್ಕಾಪಟ್ಟೆ ಸೆನ್ಸೇಷನಲ್ ಸುದ್ದಿಯಾಗಿ ಮಾರ್ಪಟ್ಟಿತ್ತು.
ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಪ್ರೇಮ, ಮದುವೆ, ರಾಖಿ ಮತಾಂತರಗೊಂಡಿದ್ದೇನೆ ಎಂದು ಹೇಳಿದ್ದು ಎಲ್ಲಾ ಸುದ್ದಿಗಳಾಗುತ್ತಿರುವಾಗಲೇ ರಾಖಿ ಪತಿ ತನಗೆ ಮೋಸ ಮಾಡಿದ್ದಾನೆಂದು, ವಂಚನೆ ಮಾಡಿದ್ದಾನೆಂದು ಆದಿಲ್ ಖಾನ್ ಮೇಲೆ ದೂರು ನೀಡಿ ಆತನನ್ನು ಜೈಲಿಗೆ ಅಟ್ಟಿ ಅನಂತರ ತಾನು ಪತಿಯಿಂದ ದೂರಾದ ಮೇಲೆ ಮತ್ತೆ ಖುಷಿಯಾಗಿದ್ದೇನೆ, ಸ್ವತಂತ್ರಳಾಗಿದ್ದೇನೆ ಎಂದು ಹೇಳಿ ಸಂಭ್ರಮಿಸಿದ್ದರು.
ಈಗ ರಾಖಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ರಾಖಿ ಈ ಬಾರಿ ತಮ್ಮ ಕಾರಿನ ಡ್ರೈವರ್ ನಿಂದ ಮೋಸ ಹೋಗಿರುವುದಾಗಿ ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ತಮ್ಮ ಕಾರಿನ ಡ್ರೈವರ್ ಕಾರು ಹಾಗೂ ಅದರಲ್ಲಿದ್ದ ಬಟ್ಟೆಗಳು ಮತ್ತು ಒಡವೆಗಳ ಸಮೇತ ಪರಾರಿಯಾಗಿದ್ದಾನೆ ಎಂದು ಆಟೋವೊಂದರಲ್ಲಿ ಕುಳಿತ ರಾಖಿ ಪೋಲಿಸ್ ಠಾಣೆಗೆ ದೂರು ನೀಡಲು ಹೋಗುತ್ತಿರುವುದಾಗಿ ಹೇಳಿದ್ದಾರೆ.