ಪೊಲೀಸ್ ದಂಪತಿಗಳ ಮೇಲೆ ಪರಮೇಶ್ವರ ಹೃದಯದ ಕಣ್ಣು ತೆರೆಯುವರೆ…!?
ಲೇಖನ: ಹನುಮೇಶ್ ಕೆ ಯಾವಗಲ್
ಪೊಲೀಸ್ ಇಲಾಖೆ ಸರ್ಕಾರದ ಅಡುಗೆ ಮನೆ ಇದ್ದಂತೆ.
ಅಡುಗೆ ಮನೆ ಸರಿಯಾಗಿದ್ದರೆ, ಮನೆಯ ಉಳಿದ ಎಲ್ಲಾ ವಿಭಾಗಗಳೂ ಸರಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತವೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಂಪತಿಗಳು ಈಗ ಪೇಚಿಗೆ ಸಿಲುಕಿದ್ದಾರೆ.ಇವರ ಮೇಲೆ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರ ಹೃದಯದ ಕಣ್ಣು ಬೀಳಬೇಕಿದೆ. ಮಾನವೀಯ ನೆಲೆಯಲ್ಲಿ ಈ ಸಮಸ್ಯೆಯನ್ನು ಗೃಹ ಸಚಿವರು ಈ ಗೊಂದಲ ನಿವಾರಣೆ ಮಾಡಬೇಕಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರೊಬೇಷನರಿ ಅವಧಿ ಮುಗಿದ ಮೇಲೆ ಎರಡು ವರ್ಷಗಳ ನಂತರ ದಂಪತಿಗಳನ್ನು ಒಂದೇ ಯುನಿಟ್ ಗೆ ವರ್ಗಾವಣೆ ಮಾಡುವ ಅವಕಾಶ ಬದಲಾವಣೆ ಮಾಡಲಾಗಿದೆ.
ಇದು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ‘ಗಂಡ -ಹೆಂಡತಿ ‘ ಯರನ್ನು ಪೇಚಿಗೆ ಸಿಲುಕಿಸಿದೆ. ಈಗ ಪ್ರೊಬೇಷನರಿ ಅವಧಿ ಮುಗಿದ ಮೇಲೆ ಏಳು ವರ್ಷಗಳ ಕಾಲ ದಂಪತಿ ವರ್ಗಾವಣೆ ಮಾಡುವ ಅವಕಾಶ ಕಲ್ಪಿಸಿದ್ದು, ಒಂದೇ ಕಡೆ ದಂಪತಿ ಬರಲು ಏಳು ವರ್ಷಗಳ ಕಾಲ ಕಾಯಬೇಕಿದೆ.
ಈ ನಿಯಮ ತಿದ್ದುಪಡಿ ಮಾಡಿ, ಕುಟುಂಬದ ಸದಸ್ಯರು ಒಟ್ಟಾಗಿ ಇರಲು ಗೃಹ ಸಚಿವರು ಅನುವು ಮಾಡಿಕೊಡಬೇಕಿದೆ.
ಕುಟುಂಬದಲ್ಲಿ ನೆಮ್ಮದಿ ಇಲ್ಲದೆ ಈ ಸಿಬ್ಬಂದಿ ಅಸಹನೀಯ ಮಾನಸಿಕ ಒತ್ತಡ -ನೋವು ಅನುಭವಿಸುತ್ತಿದ್ದಾರೆ.
ಅನೇಕ ಕುಟುಂಬಗಳಲ್ಲಿ ವಿಚ್ಛೇದನ ಪ್ರಕರಣಗಳು ಬೆಳಕಿಗೆ ಬಂದಿವೆ.
ವಯೋವೃದ್ಧ ತಂದೆ -ತಾಯಿಯರನ್ನು ನೋಡಿಕೊಳ್ಳುವವರು ಇಲ್ಲದೆ, ಇಳಿವಯಸ್ಸಿನಲ್ಲಿ ಪೊಲೀಸ್ ದಂಪತಿಗಳ ಪಾಲಕರು ಇಲಾಖೆ ಬಗ್ಗೆ ಬೇಸರಪಡುವಂತಾಗಿದೆ.ಹೃದಯವಂತರು… ಮಾನವೀಯ ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ…ಅನುಭವಿ ಗೃಹ ಸಚಿವರು ಡಾ. ಜಿ ಪರಮೇಶ್ವರ್. ಅವರು ತಮ್ಮ ಹೃದಯದ ಮೂರನೇ ಕಣ್ಣು ತೆರೆದು… ಬಡಪಾಯಿ ಪೊಲೀಸ್ ದಂಪತಿಗಳನ್ನು ಒಂದಾಗಿಸುವ ಕೆಲಸಕ್ಕೆ ಮುಂದಾಗುತ್ತಾರೆ ಎಂದು ಪೊಲೀಸ್ ಸಿಬ್ಬಂದಿ ಆಶಾಭಾವನೆಯಿಂದ ಕಾಯುತ್ತಿದ್ದಾರೆ.