ದಕ್ಷಿಣ ಸಿನಿಮಾ ರಂಗದ ಜನಪ್ರಿಯ ನಟಿ ಮತ್ತು ಸ್ಟಾರ್ ನಟಿ ಕೂಡಾ ಆಗಿರುವ ಸಮಂತ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಗಡೆ ಬಂದಿದೆ. ಪ್ರಸ್ತುತ ದಿನಗಳಲ್ಲಿ ನಟಿ ಸಮಂತಾ ತೆಲುಗಿನ ಖುಷಿ ಸಿನಿಮಾದಲ್ಲಿ ಮತ್ತು ಬಾಲಿವುಡ್ ನ ಸಿಟಾಡೆಲ್ ವೆಬ್ ಸೀರೀಸ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಗಾಗ ನಟಿಯ ಆರೋಗ್ಯದ ಕುರಿತಾಗಿ ಒಂದಷ್ಟು ಹೊಸ ವಿಚಾರಗಳು ಹೊರಗಡೆ ಬರುತ್ತಿವೆ. ಇವೆಲ್ಲವುಗಳ ಮಧ್ಯೆ ಇದೀಗ ಮತ್ತೊಂದು ಹೊಸ ಸುದ್ದಿ ವೈರಲ್ ಆಗಿದ್ದು, ಇದು ನಟಿಯ ಅಭಿಮಾನಿಗಳಿಗೆ ಮತ್ತು ಸಿನಿ ಪ್ರೇಮಿಗಳಿಗೆ ದೊಡ್ಡ ಶಾಕ್ ನೀಡುವಂತಾಗಿದೆ.ಇದ್ದಕ್ಕಿದ್ದ ಹಾಗೆ ಸಮಂತಾ ಸಿನಿಮಾರಂಗದಿಂದ ದೂರ ಸರಿಯುವ ಆಲೋಚನೆಯನ್ನು ಮಾಡಿದ್ದಾರೆ ಎಂದು ಸುದ್ದಿಗಳು ಹರಿದಾಡಿವೆ. ಪ್ರಸ್ತುತ ತಮ್ಮ ಕೈಯಲ್ಲಿರುವ ಎರಡು ಪ್ರಾಜೆಕ್ಟ್ ಗಳನ್ನು ಆದಷ್ಟು ಶೀಘ್ರದಲ್ಲೇ ಮುಗಿಸಿ ಸ್ವಲ್ಪಕಾಲ ಚಿತ್ರರಂಗದಿಂದ ದೂರ ಉಳಿಯುವ ಆಲೋಚನೆಯನ್ನು ನಟಿ ಮಾಡಿದ್ದಾರೆ ಎನ್ನುವ ವಿಷಯ ಈಗ ಪ್ರಮುಖ ಸುದ್ದಿಯಾಗಿದೆ. ವಿಜಯ ದೇವರಕೊಂಡ ಜೊತೆಗೆ ಸಮಂತಾ ನಟಿಸುತ್ತಿರುವ ಖುಷಿ ಸಿನಿಮಾ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಲಾಗಿದೆ.ಸಮಂತಾ ತಾವು ಒಪ್ಪಿಕೊಂಡಿದ್ದ ಹೊಸ ಪ್ರಾಜೆಕ್ಟ್ ಗಳು ಮತ್ತು ಅದಕ್ಕಾಗಿ ಪಡೆದಿದ್ದ ಅಡ್ವಾನ್ಸ್ ಹಣವನ್ನು ನಿರ್ಮಾಪಕರಿಗೆ ವಾಪಸ್ಸು ನೀಡಿದ್ದಾರೆ ಎಂದು ಮಾಹಿತಿ ಹರಿದಾಡುತ್ತಿದೆ. ಸಮಂತಾ ಇಂತಹ ಒಂದು ನಿರ್ಧಾರವನ್ನು ತೆಗೆದುಕೊಳ್ಳಲು ಅನಾರೋಗ್ಯವೇ ಕಾರಣ ಎನ್ನಲಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ನಟಿಯು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ಇದೀಗ ಹೆಚ್ಚುವರಿ ಚಿಕಿತ್ಸೆಗಾಗಿ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಳ್ಳಲು ನಟಿ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.ವರದಿಗಳ ಪ್ರಕಾರ ಸಮಂತಾಗೆ ಹೆಚ್ಚಿನ ವಿಶ್ರಾಂತಿ ಅವಶ್ಯಕತೆ ಇರುವುದರಿಂದ ಇಂತಹದೊಂದು ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದ್ದು, ವೈದ್ಯರ ಸಲಹೆಯಂತೆ ಒಂದು ವರ್ಷ ಕಾಲ ಚಿತ್ರರಂಗದಿಂದ ದೂರವಿರುವ ಮೂಲಕ, ಚಿಕಿತ್ಸೆಯ ಜೊತೆಗೆ ವಿಶ್ರಾಂತಿಯನ್ನು ಪಡೆದುಕೊಳ್ಳಲು ನಟಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ವೈರಲ್ ಆದಮೇಲೆ ನಟಿಯ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಹೊಸ ಪ್ರಾಜೆಕ್ಟ್ ಗಳ ಅಡ್ವಾನ್ಸ್ ವಾಪಸ್ಸು ಮಾಡಿದ ಸಮಂತಾ! ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ನಟಿ ?
161