Home » ಪ್ರಭಾಸ್ ಗೆ ಟಕ್ಕರ್ ಕೊಡಲು ಪ್ರಾಜೆಕ್ಟ್ ಗೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್: ಸಿಕ್ಕಾಪಟ್ಟೆ ಥ್ರಿಲ್ ಆದ ಸಿನಿ ಪ್ರೇಮಿಗಳು

ಪ್ರಭಾಸ್ ಗೆ ಟಕ್ಕರ್ ಕೊಡಲು ಪ್ರಾಜೆಕ್ಟ್ ಗೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್: ಸಿಕ್ಕಾಪಟ್ಟೆ ಥ್ರಿಲ್ ಆದ ಸಿನಿ ಪ್ರೇಮಿಗಳು

by Suddi Mane
0 comment

ತೆಲುಗು ಸಿನಿಮಾ ರಂಗದ ಬಹುದೊಡ್ಡ ಮತ್ತು ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಭಾರೀ ವೆಚ್ಚದಲ್ಲಿ ಪ್ರಾಜೆಕ್ಟ್ ಕೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಆಗಾಗ ಈ ಸಿನಿಮಾದ ವಿಚಾರಗಳು ಸಾಕಷ್ಟು ಸದ್ದನ್ನು ಮಾಡುತ್ತಲೇ ಇದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ಅಂದಗಾತಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಮಹಾನಟಿ ಸಿನಿಮಾದ ಮೂಲಕ ಒಂದು ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ನಾಗ್ ಅಶ್ವಿನ್ ಈ ಸಿನಿಮಾವನ್ನು ನಿರ್ದೇಶನ

ಮಾಡುತ್ತಿದ್ದಾರೆ.ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಸಹಾ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತದೆ ಎಂದು ವೈಜಯಂತಿ ಮೂವೀಸ್ ತಿಳಿಸಿದೆ. ಈ ಅದ್ದೂರಿ ಸಿನಿಮಾದಲ್ಲಿ ಪ್ರಭಾಸ್ ಎದುರಿಗೆ ವಿಲನ್ ಆಗಿ ಯಾರು ನಟಿಸುತ್ತಾರೆ ಎನ್ನುವ ಪ್ರಶ್ನೆ ಬಹುದಿನಗಳಿಂದ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳನ್ನು ಬಹುವಾಗಿ ಕಾಡುತ್ತಿತ್ತು. ಇದಕ್ಕೆ ಈಗ ವೈಜಯಂತಿ ಮೂವೀಸ್ ಅಧಿಕೃತವಾಗಿ ಉತ್ತರ ನೀಡಿದೆ.

ಹೌದು, ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟ, ದಕ್ಷಿಣ ಭಾರತದ ದೊಡ್ಡ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ನಟ ಕಮಲ ಹಾಸನ್ ಖಡಕ್ ವಿಲನ್ ಪಾತ್ರದ ಮೂಲಕ ಪ್ರಾಜೆಕ್ಟ್ ಕೆ ಸಿನಿಮಾಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ರೋಚಕ ಎನಿಸುವ ವಿಚಾರವನ್ನು ವೈಜಯಂತಿ ಮೂವೀಸ್ ಅಧಿಕೃತವಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಘೋಷಣೆ ಮಾಡಿದ್ದು, ಈ ಸುದ್ದಿ ಕೇಳಿ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗ್ತಿದ್ದಾರೆ. ವೈಜಯಂತಿ ಮೂವೀಸ್ ಶೇರ್ ಮಾಡಿದ ಪೋಸ್ಟ್ ಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರ್ತಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies