ಮೆಗಾ ಸ್ಟಾರ್ ಚಿರಂಜೀವಿ ಅವರ ಮೆಗಾ ಕುಟುಂಬದಲ್ಲಿ ಮತ್ತೊಂದು ವಿಚ್ಚೇದನ ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಕಳೆದ ಕೆಲವು ದಿನಗಳಿಂದ ಹರಿಡಿದ್ದ ಸುದ್ದಿಗಳಿಗೆ ಸ್ಪಷ್ಟನೆ ದೊರೆತಿದೆ. ನಟ ಚಿರಂಜೀವಿ ಅವರ ಸಹೋದರ, ನಟ, ನಿರ್ಮಾಪಕ ಆಗಿರುವ ನಾಗ ಬಾಬು ಅವರ ಮಗಳು ನಿಹಾರಿಕಾ ಕೊನಿಡೆಲಾ ಅವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಿಚಾರವೊಂದು ಕಳೆದ ಕೆಲವು ದಿನಗಳಿಂದಲೂ ಹರಿದಾಡಿತ್ತು. ಆದರೆ ಈ ವಿಚಾರವಾಗಿ ಮೆಗಾ ಕುಟುಂದಿಂದ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಈಗ ಕೊನೆಗೂ ಅಧಿಕೃತ ಮಾಹಿತಿ ಹೊರ ಬಂದಿದೆ.

ನಾಗ ಬಾಬು ಅವರ ಮಗಳು ನಿಹಾರಿಕಾ ಮತ್ತು ಅವರ ಪತಿ ಚೈತನ್ಯ ಜೊನ್ನಲಗಡ್ಡ ದಾಂಪತ್ಯ ಬದುಕಿಗೆ ಕೊನೆ ಹಾಡಿದ್ದಾರೆ. ಈಗಾಗಲೇ ಕೌಟುಂಬಿಕ ನ್ಯಾಯಾಲಯವು ಇವರಿಗೆ ವಿಚ್ಛೇದನವನ್ನು ಮಂಜೂರು ಮಾಡಿಯಾಗಿದೆ ಎನ್ನಲಾಗಿದೆ. ಆದರೆ ಇವರ ವಿಚ್ಛೇದನಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ. ನಿಹಾರಿಕ ಮತ್ತು ಚೈತನ್ಯ ಮದುವೆಯು ಡಿಸೆಂಬರ್ 9, 2020 ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಸುಮಾರು ಎರಡೂವರೆ ವರ್ಷಗಳ ದಾಂಪತ್ಯ ಜೀವನ ಈಗ ಮುರಿದು ಬಿದ್ದಿದೆ.

ಕೆಲವು ದಿನಗಳ ಹಿಂದೆಯಷ್ಟೇ ನಿಹಾರಿಕಾ ಮತ್ತು ಚೈತನ್ಯ ತಮ್ಮ ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದರು ಹಾಗೂ ಮದುವೆಯ ಮತ್ತು ಜೊತೆಯಾಗಿರುವ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ್ದರು. ಆಗಲೇ ಇವರ ವಿಚ್ಚೇದನದ ಅನುಮಾನ ಮೂಡಿತ್ತು. ಈಗ ಅದು ನಿಜವಾಗಿದೆ. ಮೆಗಾ ಕುಟುಂಬದಲ್ಲಿ ವಿಚ್ಚೇದನ ಇದೇ ಮೊದಲಲ್ಲ. ಚಿರಂಜೀವಿ ಅವರ ಸಹೋದರ ನಾಗಬಾಬು ಇಬ್ಬರು ಪತ್ನಿಯರಿಗೆ ವಿಚ್ಚೇದನ ನೀಡಿದ್ದಾರೆ.

ಇನ್ನು ಮೆಗಾಸ್ಟಾರ್ ಚಿರಂಜೀವಿ ಅವರ ಮಗಳು ಶ್ರೀಜಾ ಮೊದಲು ತಾವು ಪ್ರೀತಿಸಿ ಮದುವೆಯಾಗಿದ್ದ ಸಿರೀಷ್ ಭರದ್ವಾಜ್ ಗೆ ವಿಚ್ಚೇದನ ನೀಡಿದ್ದರು. ಅನಂತರ ಕುಟುಂಬದವರು ನೋಡಿ ಮದುವೆ ಮಾಡಿದ್ದ ನಟ ಕಲ್ಯಾಣ್ ದೇವ್ ಗೂ ವಿಚ್ಚೇದನ ನೀಡಿ ಪತಿಯಿಂದ ದೂರಾಗಿದ್ದಾರೆ ಎನ್ನುವ ಸುದ್ದಿಗಳು ಸಹಾ ಕೆಲವು ದಿನಗಳ ಹಿಂದೆ ಎಲ್ಲೆಡೆ ಹರಿದಾಡಿತ್ತು. ಒಟ್ಟಾರೆ ಸೆಲೆಬ್ರಿಟಿಗಳ ಜೀವನದಲ್ಲಿ ಮದುವೆ, ವಿಚ್ಚೇದನ ತೀರಾ ಸಾಮಾನ್ಯ ಎನಿಸಿ ಬಿಟ್ಟಿದೆ.