ಟಾಲಿವುಡ್ ನಟ ಪ್ರಭಾಸ್ ಪ್ರಸ್ತುತ ಪ್ಯಾನ್ ಇಖಡಿಯಾ ನಟನಾಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅದರೂ ಈ ನಟ ‘ಬಾಹುಬಲಿ 2’ ನಂತರ ನಟಿಸಿದ ಯಾವ ಸಿನಿಮಾ ಕೂಡಾ ದೊಡ್ಡ ಯಶಸ್ಸು ಪಡೆದಿಲ್ಲ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ಮತ್ತೆ ಅಇಗ ಆದಿಪುರುಷ ಸಿನಿಮಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ನೆಗೆಟಿವ್ ಅಭಿಪ್ರಾಯಗಳನ್ನು ಪಡೆದಿದೆ. ಸಿನಿಮಾಗಳು ಸೋಲುತ್ತಿದ್ದರೂ ಸಹಾ ನಟ ಪ್ರಭಾಸ್ ಗೆ ಬೇಡಿಕೆ ಕಡಿಮೆ ಆಗಿಲ್ಲ. ಬಹುಕೋಟಿ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ.

ಈಗ ಪ್ರಭಾಸ್ ಕುರಿತಾಗಿ ಒಂದು ಹೊಸ, ಅಚ್ಚರಿಯ ವಿಷಯ ಹೊರಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಏನಿದು ಹೊಸ ವಿಷಯ ಅನ್ನೋದಾದ್ರೆ, ನಟ ಪ್ರಭಾಸ್ ಅವರು ದೂರದ ಇಟಲಿಯಲ್ಲಿ ಒಂದು ಐಷಾರಾಮಿ ವಿಲ್ಲಾದ ಮಾಲೀಕರಾಗಿದ್ದಾರಂತೆ. ಅಲ್ಲದೇ ಈ ವಿಲ್ಲಾದ ಬಾಡಿಗೆ ಹಣ ಎಷ್ಟು ಎಂದು ಕೇಳಿ ಅಭಿಮಾನಿಗಳು ಮತ್ತು ನೆಟ್ಟಿಗರು ಸಹಾ ಶಾಕ್ ಆಗಿದ್ದಾರೆ. ಬಹಳಷ್ಟು ಜನ ಸ್ಟಾರ್ ಗಳು ಆಗಾಗ ವಿದೇಶಕ್ಕೆ ಭೇಟಿ ನೀಡುವುದರಿಂದ ಅಲ್ಲಿ ಅವರು ಮನೆ ಅಥವಾ ವಿಲ್ಲಾ ಖರೀದಿ ಮಾಡುವುದು ಸಾಮಾನ್ಯ.

ಅದೇ ರೀತಿ ಪ್ರಭಾಸ್ ಕೂಡಾ ಇಟಲಿಯಲ್ಲಿ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಬಹಳ ಐಶಾರಾಮೀ ಆಗಿರುವ ಈ ವಿಲ್ಲಾ ವನ್ನು ಬಾಡಿಗೆಗೆ ನೀಡಿದ್ದು, ಇದರಿಂದ ಪ್ರಭಾಸ್ ಅವರಿಗೆ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂಪಾಯಿಗಳ ಬಾಡಿಗೆ ಬರುತ್ತದೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆಯೇ ನಟ ಈ ವಿಲ್ಲಾ ಖರೀದಿ ಮಾಡಿದ್ದು, ಸಿನಿಮಾಗಳಿಂದ ಬಿಡುವು ಸಿಕ್ಕಾಗ ಇಟಲಿಗೆ ತೆರಳಿದಾಗ ಇದೇ ವಿಲ್ಲಾದಲ್ಲಿ ಉಳಿದುಕೊಳುತ್ತಾರಂತೆ ಪ್ರಭಾಸ್. ತಮ್ಮ ಸೇವಿಂಗ್ಸ್ ಹಣದಲ್ಲಿ ಸ್ವಲ್ಪ ಅವರು ಇದರ ಮೇಲೆ ಹೂಡಿಕೆ ಮಾಡಿದ್ದಾರೆನ್ನಲಾಗಿದೆ.