ಶಂಕಿತ ಉಗ್ರರ ಭಯಾನಕ ಪ್ಲಾನ್ ನಿಂದ ರಾಜಧಾನಿ ಬೆಂಗಳೂರು ಸ್ವಲ್ಪದರಲ್ಲಿ ಪಾರಾಗಿದೆ. ಸಿಸಿಬಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯ ಫಲವಾಗಿ ಐವರು ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದಾರೆ. ಈ ಪಾತಕಿಗಳು ಉಗ್ರನ ಜೊತೆ ಸೇರಿ ನಡೆಸಲು ಉದ್ದೇಶಿಸಿದ್ದ ವಿ ಧ್ವಂ ಸಕ ಕೃತ್ಯ ಈಗ ವಿಫಲವಾಗಿದೆ. ಬೆಂಗಳೂರಿನ ಪೊಲೀಸರಿಗೆ ಸಂಗೀತ ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕವಾಗಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಈ ಐದು ಜನ ಶಂಕಿತ ಉಗ್ರರು ವಾಸವಾಗಿದ್ದರು.
ಪ್ರಕರಣದ A2 ಜುನೈದ್ ಎಲ್ಲರೂ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬೀಳುವಂತೆ ಮಾಡಿದ್ದಾನೆ. ಜುನೈದ್ ದುಬೈನಲ್ಲಿ ಇದ್ದುಕೊಂಡು ಫಂಡಿಂಗ್ ಮಾಡಿಸುತ್ತಿದ್ದನು. ಅಲ್ಲಿನ ಶ್ರೀಮಂತರ ಮೂಲಕ ಬೆಂಗಳೂರಿನಲ್ಲಿರುವ ಒಬ್ಬ ಆರೋಪಿಗೆ ಫಂಡಿಂಗ್ ಮಾಡಿಸಿದ್ದು, ಗುಪ್ತಚರ ದಳ ಈ ದುಬೈ ಹಣದ ಹಿಂದೆ ತನಿಖೆ ನಡೆಸಿದಾಗ, ಜೈಲಿನಲ್ಲಿದ್ದ ಆರೋಪಿ ಫಂಡ್ ಪಡೆಯುತ್ತಿದ್ದನು ಎನ್ನುವ ವಿಚಾರವು ಬಹಿರಂಗವಾಗಿದೆ.
ಜೈಲಿನಲ್ಲಿದ್ದ ಆರೋಪಿ ನಾಸಿರ್ ಗ್ರೂಪ್ ಗೆ ದುಬೈ ನಿಂದ ಹಣ ಬಂದ ಮಾಹಿತಿ ಪೊಲೀಸರಿಗೆ ದಕ್ಕಿದೆ. ಅವನ ಚಟುವಟಿಕೆಗಳನ್ನು ಗಮನಿಸಿದಾಗ ಶಂಕಿತ ಉಗ್ರರ ತಂಡ ರಚನೆಯಾಗಿದೆ ಎನ್ನುವುದು ತಿಳಿದು ಬಂದಿದೆ. ನಂತರ ಈ ತಂಡದ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಸಿಸಿಬಿ ತಂಡವು ಹುಡುಕಾಟ ನಡೆಸಿದ್ದು, ಆರೋಪಿಗಳ ಚಟುವಟಿಕೆಗಳ ಆಧಾರದಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಶಂಕಿತ ಉಗ್ರ ಸುಹೈಲ್ ಬಾ ಶಾಂತಿತ ಉಗ್ರ ಸುಹೈಲ್ ಬೆಂಗಳೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ. ದುಬೈನಲ್ಲಿರುವ ಆರೋಪಿ ಜುನೈದ್ ಸರಣಿ ಬಾಂ ಬ್ ಸ್ಫೋ ಟದ ಆರೋಪಿ ನಜೀರ್ ಜೊತೆ ಸಂಪರ್ಕ ಹೊಂದಿದ್ದ. ಜೈಲಿನಲ್ಲಿ ನಜೀರ್ ನೊಂದಿಗೆ ಉಗ್ರ ಚಟುವಟಿಕೆಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದನು. ನಜೀರ್ ಕೊಟ್ಟಿರುವ ಐಡಿಯಾಗಳ ಆಧಾರದ ಮೇಲೆ ಜುನೈದ್ ಇತರರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.