ಟಾಲಿವುಡ್ ನ ಸಾಕಷ್ಟು ಚರ್ಚಿತ ಜೋಡಿಗಳಲ್ಲಿ ಒಂದು ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಮತ್ತು ಲೇಡಿ ಸೂಪರ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಜೋಡಿ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಕಾಂಬಿನೇಷನ್ ನಲ್ಲಿ ಮಿರ್ಚಿ, ಬಾಹುಬಲಿ, ಬಾಹುಬಲಿ 2 ನಂತರ ಸೂಪರ್ ಡೂಪರ್ ಹಿಟ್ ಸಿನಿಮಾಗಳು ತೆರೆಗೆ ಬಂದಿದೆ. ಈ ಜೋಡಿಯ ಕೆಮಿಸ್ಟ್ರಿ ಅಭಿಮಾನಿಗಳು ಮತ್ತು ಸಿನಿಮಾ ಪ್ರಿಯರ ಮನಸ್ಸನ್ನು ಗೆದ್ದಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಜೋಡಿ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅವರ ಅಭಿಮಾನಿಗಳು ಇವರನ್ನು ಜೋಡಿಯಾಗಿ ನೋಡುವ ನಿರೀಕ್ಷೆಯಲ್ಲಿ ಇದ್ದಾರೆ.
ಇದೀಗ ಈ ಜೋಡಿ ತಮ್ಮ ಫ್ಯಾನ್ಸ್ ಗೆ ಗುಡ್ ನ್ಯೂಸ್ ನೀಡಿದ್ದಾರೆ. ಬಾಹುಬಲಿ 2 ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಸಿನಿಮಾ ಮಾಡಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಅವರ ಅಭಿನಯದ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಸಿನಿಮಾ ಘೋಷಣೆಯಾಗಿದ್ದು, ಸಿನಿಮಾ ಚಿತ್ರೀಕರಣ ಇನ್ನೂ ಸ್ವಲ್ಪ ತಡವಾಗುವುದು ಎನ್ನುವ ಸುದ್ದಿಗಳಾಗಿತ್ತು.
ಇನ್ನು ಪ್ರಭಾಸ್ ಪ್ರಸ್ತುತ ಸಲಾರ್, ಕಲ್ಕಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ತಮಿಳು ನಿರ್ದೇಶಕ ಲೋಕೇಶ್ ಕನಗರಾಜು ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೊತೆಯಾಗಿ ನಟಿಸಲಿದ್ದಾರೆನ್ನುವ ಸುದ್ದಿಗಳು ಹರಿದಾಡಿದ್ದು, ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೇ ಅನುಷ್ಕಾ ಮತ್ತು ಪ್ರಭಾಸ್ ಜೋಡಿ ಎನ್ನುವ ಮಾತು ಸಿನಿಮಾ ಮೇಲೆ ನಿರೀಕ್ಷೆಗಳನ್ನು ಸಹಾ ದುಪ್ಪಟ್ಟು ಮಾಡಿದೆ.