ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆಂದು ದಿನವೂ ನೂರಾರು ಜನ ತಮ್ಮ ಊರುಗಳಿಂದ ರಾಜಧಾನಿಗೆ ಬರುತ್ತಾರೆ. ಆದರೆ ಅವರಲ್ಲಿ ಕೆಲವರಿಗೆ ಮಾತ್ರವೇ ಅವಕಾಶ, ಅದೃಷ್ಟ ಒಲಿದು ಬಂದು, ಸಿನಿಮಾ ಜಗತ್ತಿನಲ್ಲಿ ಕೆಲಸವನ್ನು ಮತ್ತು ಸ್ಟಾರ್ ಡಂ ಅನ್ನು ಪಡೆಯುತ್ತಾತೆ. ಉಳಿದವರು ನಿರಾಸೆ ಪಡುವುದು ಸಹಜ. ದಕ್ಷಿಣ ಸಿನಿಮಾದ ಸ್ಟಾರ್ ನಟ, ಹಿರಿಯ ನಟ ಕಮಲ್ ಹಾಸನ್ ಜೊತೆ ‘ಅಪೂರ್ವ ಸಾಗೋಧರ್ಗಳ್’ ಚಿತ್ರದಲ್ಲಿ ನಟಿಸಿದ್ದ ನಟ ಮೋಹನ್ ರಸ್ತೆಬದಿಯಲ್ಲಿ ಶವವಾಗಿ ಪತ್ತೆಯಾಗಿರುವ ಸುದ್ದಿ ತಮಿಳು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ.

ದೈಹಿಕವಾಗಿ ಕಡಿಮೆ ಎತ್ತರದ ವ್ಯಕ್ತಿಯಾಗಿದ್ದ ಮೋಹನ್ ಮಧುರೈ ಮೂಲದವರು ಮತ್ತು ನಟನೆಯ ಮೇಲೆ ಆಸಕ್ತಿಯಿಂದಾಗಿ ಬಹಳ ಉತ್ಸಾಹದಿಂದ ಚೆನ್ನೈಗೆ ಬಂದವರು. ಅವರು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅದರಲ್ಲಿ ಅಪೂರ್ವ ಸಹೋದರ್ಗಳ್ ಸಿನಿಮಾ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದ್ದು, ಅದರಲ್ಲಿ ಅವರು ಕುಬ್ಜ ಕಮಲ್ ಅವರ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದ್ದಾರೆ.

ಮೋಹನ್ ಅವರ ಇನ್ನೊಂದು ಪ್ರಸಿದ್ಧ ಪಾತ್ರವು ಬಾಲ ಅವರ ‘ನಾನ್ ಕಡವುಲ್’ ಸಿನಿಮಾದಲ್ಲಿನ ಪಾತ್ರವಾಗಿತ್ತು. ಆದರೆ ದಿನ ಕಳೆದಂತೆ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಮಧುರೈಗೆ ಮರಳಿದರು. ಮೂಲಗಳು ಪ್ರಕಾರ ಬಡತನದ ಬೇಗೆಯಿಂದ ಮೋಹನ್ ಒಂದು ಹೊತ್ತಿನ ಊಟಕ್ಕಾಗಿ ತಿರುಪುರಂಗುಂಡ್ರಂ ದೇವಸ್ಥಾನವನ್ನು ಅವಲಂಬಿಸಬೇಕಾಯಿತು ಮತ್ತು ಭಿಕ್ಷಾಟನೆಯನ್ನೂ ಸಹಾ ಮಾಡುತ್ತಿದ್ದರು ಎನ್ನಲಾಗಿದೆ.

60 ವರ್ಷ ವಯಸ್ಸಿನ ಮೋಹನ್ ಅವರು ರಸ್ತೆಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರು ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಅವರ ಸ್ವಗ್ರಾಮಕ್ಕೆ ಕಳುಹಿಸಲು ಅಗತ್ಯವಾದ ಸಾರಿಗೆ ವ್ಯವಸ್ಥೆಯನ್ನು ಸಹಾ ಮಾಡಿದ್ದಾರೆ. ಹಾಸ್ಗ ನಟನ ಜೀವನ ಹೀಗೆ ನೋವಿನಲ್ಲಿ ಅಂತ್ಯವಾಗಿದ್ದು ಕಂಡು ಅನೇಕರು ಮರುಗಿದ್ದಾರೆ.