ದಕ್ಷಿಣ ಸಿನಿಮಾ ರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿ ಸಹಾ ಹೆಸರನ್ನು ಮಾಡಿದ್ದ ನಟಿ ಆಸಿನ್ ಹೆಚ್ಚು ಹೆಸರು ಮಾಡಿದ್ದು ಮಾತ್ರ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಎನ್ನುವುದು ಸತ್ಯ. ಬಾಲಿವುಡ್ ನಲ್ಲಿ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡರೂ ಕೂಡಾ ನಿರೀಕ್ಷಿತ ಮಟ್ಟದ ಗೆಲುವನ್ನು ನಟಿ ಪಡೆಯಲಿಲ್ಲ. ಬಾಲಿವುಡ್ ಗೆ ಹೋದ ನಂತರ ನಟಿ ಮತ್ತೆ ದಕ್ಷಿಣ ಸಿನಿಮಾಗಳ ಕಡೆಗೆ ಬರಲಿಲ್ಲ. ಗಜಿನಿ, ಅಮ್ಮ ನಾನ್ನ ಓ ತಮಿಳು ಅಮ್ಮಾಯಿ ಸಿನಿಮಾಗಳ ಮೂಲಕ ನಟಿಯು ಸೌತ್ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. ನಟಿ ಆಸಿನ್ ಅವರು ಮದುವೆ ನಂತರ ಸಿನಿಮಾ ರಂಗದಿಂದ ದೂರವೇ ಉಳಿದಿದ್ದಾರೆ.
ಮೂಲತಃ ಕೇರಳದವರಾದ ನಟಿ ಆಸಿನ್ ಮಲೆಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟರು. ಅನಂತರ ತಮಿಳು ಮತ್ತು ತೆಲುಗು ಸಿನಿಮಾ ರಂಗಕ್ಕೆ ಅಡಿಯಿಟ್ಟು ದೊಡ್ಡ ಹೆಸರನ್ನು ಮಾಡಿದರು. ಗಜನಿ ಸಿನಿಮಾ ದಕ್ಷಿಣದಲ್ಲಿ ಸೂಪರ್ ಹಿಟ್ ಆಯಿತು. ಇದೇ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆದಾಗ ಅದರಲ್ಲೂ ಆಸಿನ್ ಅವರೇ ನಾಯಕಿಯಾಗುವ ಮೂಲಕ ಬಾಲಿವುಡ್ ಗೆ ನಟಿ ಎಂಟ್ರಿ ಕೊಟ್ಟರು. ನಾಲ್ಕು ಭಾಷೆಗಳಲ್ಲಿ ನಟಿಸಿದ ಈ ನಟಿ ತೆಲುಗು ಸಿನಿಮಾ ರಂಗದಲ್ಲಿ ತಮಗಾಗಿ ಒಂದು ಸ್ಥಾನ ಪಡೆದುಕೊಂಡರು.
ಸಿನಿಮಾ ರಂಗದಲ್ಲಿ ಬೇಡಿಕೆ ಇರುವಾಗಲೇ ನಟಿಯು 2016 ರಲ್ಲಿ, ಅವರು ಮೈಕ್ರೋ ಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿ ಇರಿಸಿದರು. ನಂತರ ಅವರು ಯಾವುದೇ ಸಿನಿಮಾಗಳಲ್ಲೂ ನಟಿಸಲಿಲ್ಲ. ಆದರೆ ಈಗ ವರ್ಷಗಳ ನಂತರ ನಟಿ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಆಸಿನ್ ತನ್ನ ಪತಿಯಿಂದ ಬೇರ್ಪಟ್ಟಿದ್ದಾರೆ ಅಲ್ಲದೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆನ್ನುವ ಸುದ್ದಿಯಾಗಿತ್ತು. ಈ ಸುದ್ದಿ ಸಂಚಲನ ಸೃಷ್ಟಿಸಿತ್ತು.
ಅಲ್ಲದೇ ಆಸಿನ್ ಪತಿಯೊಂದಿಗೆ ಇರುವ ಎಲ್ಲಾ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಪುಟದಿಂದ ಡಿಲೀಟ್ ಮಾಡಿದ್ದು ಈ ವದಂತಿಗೆ ಪುಷ್ಟಿ ನೀಡಿತ್ತು. ಹೀಗೆ ವಿಚ್ಚೇದನದ ಸುದ್ದಿಗಳು ಹರಡಿದ ಬೆನ್ನಲ್ಲೇ ನಟಿ ಈ ವಿಷಯಕ್ಕೆ ತಮ್ಮ ಸ್ಪಷ್ಟನೆ ನೀಡಿ, ಹರಡಿರುವ ಸುದ್ದಿಗಳಿಗೆ ತೆರೆಯನ್ನು ಎಳೆದಿದ್ದಾರೆ, ಅದು ಕೇವಲ ಗಾಳಿ ಸುದ್ದಿ ಎನ್ನುವುದನ್ನು ಎಲ್ಲರಿಗೂ ತಿಳಿಸಿದ್ದಾರೆ. ನಟಿ ತಮ್ಮ ಪೋಸ್ಟ್ ನಲ್ಲಿ ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ.
ನಟಿಯು ತಮ್ಮ ಪೋಸ್ಟ್ ನಲ್ಲಿ, ನಾವು ಬೇಸಿಗೆ ರಜೆಯನ್ನು ಸಂಭ್ರಮಿಸುತ್ತಿದ್ದೇವೆ. ಈಗಲೂ ನಾವಿಬ್ಬರೂ ಎದುರು ಬದುರು ಕುಳಿತು ತಿಂಡಿ ತಿನ್ನುತ್ತೇವೆ. ನಾನು ವಿಚ್ಛೇದನ ಪಡೆಯುವ ಸುದ್ದಿ ನೋಡಿದೆ. ನಮ್ಮ ಮದುವೆಯ ಸಮಯದಲ್ಲಿ ನಾವು ಬೇರೆಯಾಗಿದ್ದೇವೆ ಎಂಬ ವರದಿಗಳು ಬಂದವು. ಇದನ್ನು ಬಿಟ್ಟು ಬೇರೆ ಯಾವುದಾದರೂ ಕೆಲಸ ಇದ್ದರೆ ಒಮ್ಮೆ ನೋಡಿ. ಈ ಪೋಸ್ಟ್ ಅನ್ನು ಪ್ರಕಟಿಸಲು ನನ್ನ 5 ನಿಮಿಷಗಳು ವ್ಯರ್ಥವಾಯಿತೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.