ಹಿರಿಯ ನಟ ದಿವಂಗತ ಲೋಕೇಶ್ ಮತ್ತು ಇಂದಿಗೂ ಸಿನಿಮಾ, ಸೀರಿಯಲ್ ಗಳಲ್ಲಿ ಸಕ್ರಿಯವಾಗಿರುವ ಹಿರಿಯ ನಟಿ ಗಿರಿಜಾ ಲೋಕೇಶ್ ದಂಪತಿಯ ಮಗಳು ನಟಿ ಪೂಜಾ ಲೋಕೇಶ್ ಹಲವು ವರ್ಷಗಳ ನಂತರ ಕನ್ನಡದಲ್ಲಿ ಮತ್ತೊಮ್ಮೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಕನ್ನಡದಲ್ಲಿ ಪೂಜಾ ಅವರು ಮಾಡಿದ್ದು ಕೆಲವೇ ಸಿನಿಮಾಗಳಾದರೂ ಜನರ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಅವರು ಮಾಡಿದ್ದಾರೆ. ತಮಿಳಿನಲ್ಲಿ ಸೀರಿಯಲ್ ಗಳು, ರಿಯಾಲಿಟಿ ಶೋ ಗಳಲ್ಲಿ ಅವರು ಮಿಂಚಿದ್ದಾರೆ.
ಇದಲ್ಲದೇ ಅವರ ತಮ್ಮದೇ ಪ್ರೊಡಕ್ಷನ್ ಹೌಸ್ ನಲ್ಲಿ ಹಲವು ರೀತಿಯ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಈಗ ವರ್ಷಗಳ ನಂತರ ಪ್ರೇಕ್ಷಕರನ್ನು ರಂಜಿಸಲು ಪೂಜಾ ಮತ್ತೆ ಕ್ಯಾಮೆರಾ ಮುಂದೆ ಬಂದು ಅಚ್ಚರಿಯನ್ನು ಮೂಡಿಸಿದ್ದಾರೆ. ಜೀ ಕನ್ನಡ ವಾಹಿನಿಯ ಬಹು ನಿರೀಕ್ಷಿತ ಸೀರಿಯಲ್ ಸೀತಾ ರಾಮ ಧಾರಾವಾಹಿ ಮೂಲಕ ಪೂಜಾ ಕಿರುತೆರೆಗೆ ಮರಳಿದ್ದಾರೆ. ಈ ಸೀರಿಯಲ್ ನಲ್ಲಿ ಅವರು ಒಂದು ಹೊಸದಾದ, ವಿಭಿನ್ನವಾದ ಪಾತ್ರವನ್ನು ಮಾಡುತ್ತಿದ್ದಾರೆ.
ಸೀರಿಯಲ್ ನ ಪ್ರೊಮೋ ಈಗಾಗಳಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಪ್ರೇಕ್ಷಕರ ವಿಶೇಷ ಗಮನವನ್ನು ಸೆಳೆಯುತ್ತದೆ. ಒಂದು ಖಡಕ್ ಲುಕ್ ನಲ್ಲಿ ಪೂಜಾ ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಪರಿಚಯ ಪ್ರೊಮೋ ದಲ್ಲಿ ಇದೊಂದು ವಿಲನ್ ಪಾತ್ರ ಇರಬಹುದು ಎನ್ನುವಂತೆ ಬಿಂಬಿತವಾಗಿದೆ. ಅದು ಹೌದೋ, ಅಲ್ಲವೋ ಅನ್ನೋದನ್ನ ಸೀರಿಯಲ್ ನಲ್ಲಿ ನೋಡಿ ತಿಳಿಯಬೇಕಾಗಿದೆ. ಪೂಜಾ ಅವರು ಮತ್ತೆ ನಟನೆಗೆ ಮರಳಿರುವುದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.