ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿತೀನಿ ಅಂತ ಸಿದ್ದರಾಮಯ್ಯ ಧೈರ್ಯವಾಗಿ ಮಾತನಾಡಲಿ ನೋಡೋಣ ಎಂದು ಮಾಜಿ ಸಚಿವ ಆರ್ ಅಶೋಕ್ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ಕೆಲ ನಾಯಕರು ಪ್ರತಿನಿತ್ಯ ಉಂಟು ಮಾಡುತ್ತಿರುವ 5 ವರ್ಷದ ಸಿಎಂ ವಿಚಾರಕ್ಕೆ ಮಾತನಾಡಿರುವ ಆರ್. ಅಶೋಕ್ ಸಿದ್ದರಾಮಯ್ಯ ಧೈರ್ಯವಿದ್ದರೆ ನಾನು ಎರಡು ವರ್ಷ ಮಾತ್ರ ಸಿಎಂ ಆಗಿ ಇರ್ತೀನಿ ಅಂತ ಹೇಳಲಿ ನೋಡೋಣ, ಆದರೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಹಾಗೆ ಹೇಳುವುದಿಲ್ಲ ಯಾಕಂದ್ರೆ ಸಿದ್ದರಾಮಯ್ಯ ಒಬ್ಬ ಚಾಣಾಕ್ಷ ರಾಜಕಾರಣಿ. ರಾಜಕೀಯದಲ್ಲಿ ದೇವೇಗೌಡರನ್ನು ಕಂಡರೆ ಎಲ್ಲರೂ ಹೆದರುತ್ತಾರೆ. ಆದರೆ
ಸಿದ್ದರಾಮಯ್ಯ ಅವರು ದೇವೇಗೌಡರನ್ನೇ ಆಟ ಆಡಿಸಿದ್ದರು. ಹೀಗಾಗಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ಎರಡು ವರ್ಷದ ನಂತರ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಆರ್ ಅಶೋಕ್ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಪಟ್ಟಂತೆ ಡಿ.ಕೆ ಶಿವಕುಮಾರ್ ಅವರು ತಿರುಕನ ಕನಸು ಕಾಣುತ್ತಿದ್ದಾರೆ ಈಗಾಗಲೇ ಮಹದೇವಪ್ಪ, ಕೃಷ್ಣ ಬೈರೇಗೌಡ, ಜಮೀರ್ ಸೇರಿ ಎಲ್ಲರೂ ಸಿದ್ದರಾಮಯ್ಯನ ಪರ ಇದ್ದಾರೆ ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಲ್ಲೆಲ್ಲ ಗೊಂದಲ ಸೃಷ್ಟಿಯಾಗಿದೆ. ಇಷ್ಟಾದರೂ ಸಿದ್ದರಾಮಯ್ಯನವರಿಗೆ ಧೈರ್ಯವಿದ್ದರೆ ನಾನೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿ
ಎಂದು ಹೇಳಲಿ ನೋಡೋಣ ಎಂದಿದ್ದಾರೆ. ಅದು ಅಲ್ಲದೆ ಸಿದ್ದರಾಮಯ್ಯ ಅವರನ್ನು ಡಿ.ಕೆ ಶಿವಕುಮಾರ್ ಓವರ್ ಟೇಕ್ ಮಾಡ್ತಾ ಇದ್ದಾರೆ ಶಿವಕುಮಾರ್ ವರ್ತನೆಯನ್ನು ಸಿದ್ದರಾಮಯ್ಯ ಎಲ್ಲಿಯವರೆಗೆ ಸಹಿಸಿಕೊಂಡಿರುತ್ತಾರೆ ಹೇಳಲಾಗುವುದಿಲ್ಲ ಸಿದ್ದರಾಮಯ್ಯನವರ ಕೋಪ ಯಾವಾಗ ಬೇಕಾದರೂ ಸ್ಪೋಟಗೊಳ್ಳಬಹುದು ಮುಂದೆ ಕಾಂಗ್ರೆಸ್ ಒಡೆದ ಮನೆ ಆಗುತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಇದೇ ವೇಳೆ ಡಿಕೆ ಸುರೇಶ್ ಅವರ ರಾಜಕೀಯ ವೈರಾಗ್ಯದ ಮಾತುಗಳ ಬಗ್ಗೆ ಮಾತನಾಡಿದ ಆರ್.ಅಶೋಕ್ D.K ಸುರೇಶ್ ಬಗ್ಗೆ ನನಗೆ ಸಿಂಪತಿ ಇದೆ ರಾಜಸ್ಥಾನದಲ್ಲಿ ನಡೆದಿರುವ ವಿದ್ಯಾಮಾನಗಳ ಬಗ್ಗೆ ಅವರು ನೋಡಿದ್ದಾರೆ ಸುರೇಶ್ ಅವರಿಗೆ ದೆಹಲಿಯ ರಾಜಕೀಯ ಆಟ ಚೆನ್ನಾಗಿ ತಿಳಿದಿದೆ ಹೀಗಾಗಿ ನಮ್ಮ ಅಣ್ಣನಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದು ಅನುಮಾನ ಎಂಬ ಮಾಹಿತಿ ಸುರೇಶ್ ಗೆ ಇದೆ ಹೀಗಾಗಿ ರಾಜಕೀಯ ವೈರಾಗ್ಯದ ಮಾತುಗಳನ್ನು ಆಡುತ್ತಿರಬಹುದು ಎಂದು ಅಶೋಕ್ ಹೇಳಿದ್ದಾರೆ.