ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆ ಎಂದು ಈಗ ಸುದ್ದಿಯಾಗಿದೆ. ರೇಣುಕಾಚಾರ್ಯ ಅವರು ನನ್ನ ವಿರುದ್ಧ ಶಿಸ್ತುಕ್ರಮವನ್ನು ಕೈಗೊಂಡಲ್ಲಿ ನಾನು ಬಿಜೆಪಿ ಉಳಿಸಿ ಅಭಿಯಾನವನ್ನು ಪ್ರಾರಂಭ ಮಾಡುತ್ತೇನೆ ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಚಾರ ಆರಂಭಿಸುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ರೇಣುಕಾಚಾರ್ಯ ಅವರು ತಮಗೆ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿರುವ ವಿಚಾರವಾಗಿ ಮಾಧ್ಯಮ ಒಂದರ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗಿದ್ದು ಈಗ ಅದು ಸುದ್ದಿಯಾಗಿದೆ.
ನಾನು ಯಡಿಯೂರಪ್ಪ ವಿರುದ್ಧ ಮಾತನಾಡಿದಾಗ ಕೆಲವರು ನನ್ನನ್ನು ಕರೆದು ಬೆನ್ನು ತಟ್ಟಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ರೂಮ್ ನಲ್ಲಿ ಕರೆದು ನನ್ನ ಬೆನ್ನು ತಟ್ಟಿ ಚೆನ್ನಾಗಿ ಮಾತನಾಡ್ತಿದ್ದೀಯಾ ರೇಣುಕಾಚಾರ್ಯ ಅಂತ ಹೇಳಿದ್ರು. ಢವತ್ತು ನನ್ನ ಬೆನ್ನು ತಟ್ಟಿದ್ದು ಯಾರು ಅನ್ನೋದನ್ನ ಬಹಿರಂಗಪಡಿಸುವುದಿಲ್ಲ ಎನ್ನುವ ಮಾತನ್ನು ರೇಣುಕಾಚಾರ್ಯ ಹೇಳಿದ್ದಾರೆ ಎಂಬುದಾಗಿ ಪ್ರಮುಖ ಮಾಧ್ಯಮವೊಂದು ಸುದ್ದಿಯನ್ನು ಪ್ರಕಟಿಸಿದೆ. ಯಡಿಯೂರಪ್ಪ ಪರ ಮಾತನಾಡಿದರೆ ನೋಟಿಸ್ ಕೊಡ್ತಾರೆ, ಆದರೆ ಅವರ ವಿರುದ್ಧ ಮಾತನಾಡಿದರೆ ಬೆನ್ನು ತಟ್ಟುತ್ತಾರೆ ಎಂದಿದ್ದಾರೆ ರೇಣುಕಾಚಾರ್ಯ.
ಬಿಜೆಪಿಯಲ್ಲಿ ಶಿಸ್ತು ಪಾಲನ ಸಮಿತಿ ಅಂತ ಒಂದು ಇದೆ ಅನ್ನುವುದು ಗುರುವಾರ ಗೊತ್ತಾಗಿದೆ. ನನ್ನ ಹೆತ್ತ ತಾಯಿಯ ಮೇಲೆ ಆಣೆ ಮಾಡಿ ಹೇಳ್ತೀನಿ ಯಡಿಯೂರಪ್ಪ ನನಗೆ ಹೀಗೆ ಮಾತನಾಡು ಅಂತ ಹೇಳಿಲ್ಲ. ಪಕ್ಷವು ತಾಯಿಯ ಸಮಾನ ಅದಕ್ಕೆ ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಜೆಪಿಯಲ್ಲಿ ವೀರಶೈವ ಲಿಂಗಾಯಿತರನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ಪಕ್ಷದ ಬೆಳವಣಿಗೆ ಕುರಿತಾಗಿ ಈಗಾಗಲೇ ಹಲವು ನಾಯಕರ ಜೊತೆ ಮಾತನಾಡಿದ್ದೇನೆ.
ನಾನು ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಎಲ್ಲರಿಗೂ ಪತ್ರ ಬರೆಯುತ್ತೇನೆ. ನೋಟೀಸ್ ಕೊಟ್ಟ ಮೇಲೆ ಇಂದಿನ ಸಭೆಗೆ ನಾನು ಹೋಗಿದ್ದರೆ ನನಗೆ ಗೌರವ ಸಿಗುತ್ತಿರಲಿಲ್ಲ. ಆದ್ದರಿಂದ ನಾನು ಹೋಗಿಲ್ಲ. ಒಂದು ವೇಳೆ ನನ್ನ ವಿರುದ್ಧ ಶಿಸ್ತಿನ ಕ್ರಮವನ್ನು ಕೈಗೊಂಡರೆ ನಾನು ಬಿಜೆಪಿ ಉಳಿಸಿ ಅಭಿಯಾನ ಪ್ರಾರಂಭಿಸುತ್ತೇನೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಪ್ರಚಾರ ಆರಂಭಿಸುತ್ತೇನೆ ಎಂದು ರೇಣುಕಾಚಾರ್ಯ ಅವರು ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.