ತಮಿಳಿನ ಸೂಪರ್ ಸ್ಟಾರ್, ಹಿರಿಯ ನಟ ತಲೈವಾ ರಜನಿಕಾಂತ್ ಮತ್ತು ಕನ್ನಡದ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ ಜೈಲರ್ ಸಿನಿಮಾ. ಆದರೆ ಇದೇ ವೇಳೆ ಸಿನಿಮಾದ ಟೈಟಲ್ ವಿಚಾರವಾಗಿ ಒಂದು ಸಮಸ್ಯೆ ಎದುರಾಗಿತ್ತು. ರಜನೀಕಾಂತ್ ಜೈಲರ್ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಈಗ ಮಲಯಾಳಂ (Malayalam) ನಿರ್ದೇಶಕರೊಬ್ಬರು ಈ ಸಿನಿಮಾದ ಟೈಟಲ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ..
ಮಲೆಯಾಳಂ ಸಿನಿಮಾ ನಿರ್ದೇಶಕರಾದ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಎನ್ನುವ ಹೆಸರಿನಲ್ಲಿ ಸಿನಿಮಾವೊಂದನ್ನು ಮಾಡಿದ್ದು, ಈ ಸಿನಿಮಾ ಸಹಾ ಬಿಡುಗಡೆಗೆ ಸಜ್ಜಾಗಿತ್ತು. ಆದರೆ ರಜನಿಕಾಂತ್ ಅವರು ನಾಯಕನಾಗಿರುವ ಜೈಲರ್ ಸಿನಿಮಾ ಮಲೆಯಾಳಂ ನಲ್ಲೂ ಬಿಡುಗಡೆ ಆಗುತ್ತಿರುವುದದಿಂದ ಮಲಯಾಳಂನಲ್ಲಿ ಸಿನಿಮಾದ ಟೈಟಲ್ ಬದಲಿಸಿ ಬಿಡುಗಡೆ ಮಾಡುವಂತೆ ಸಕ್ಕಿರ್ ಅವರು ಮನವಿಯನ್ನು ಮಾಡಿಕೊಂಡಿದ್ದರು.
ಆದರೆ, ಸನ್ ಪಿಕ್ಚರ್ಸ್ ಟೈಟಲ್ ಬದಲಾವಣೆ ಸಾಧ್ಯವಿಲ್ಲ ಎಂದು ಉತ್ತರವನ್ನು ನೀಡಿದೆ. ನಿರ್ಮಾಣ ಸಂಸ್ಥೆಯ ಉತ್ತರದಿಂದ ಬೇಸತ್ತಿರುವ ಸಕ್ಕಿರ್ ಮಡತ್ತಿಲ್ಲ ಅವರು ಈಗ ತಮಿಳಿನ ಜೈಲರ್ ಸಿನಿಮಾದ ವಿರುದ್ಧವಾಗಿ ಕೋರ್ಟ್ ಮೆಟ್ಟಿಲೇರಿದ್ದು, ಇದೇ ವೇಳೆ ಅವರು ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಬಿಡುಗಡೆ ಆಗುವ ಅದೇ ದಿನ ತಮ್ಮ ಮಲೆಯಾಳಂ ಸಿನಿಮಾ ಜೈಲರ್ ಅನ್ನು ಬಿಡುಗಡೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.