ಕೆಲವೇ ದಿನಗಳ ಹಿಂದೆಯಷ್ಟೇ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಮೇಲೆ ನಿರ್ಮಾಪಕರೊಬ್ಬರು ಗಂಭೀರವಾದ ಆರೋಪವನ್ನು ಮಾಡಿದ್ದರು. ನಿರ್ಮಾಪಕ ಎನ್ ಕುಮಾರ್ ಅವರು ನಟ ಸುದೀಪ್ ತಮ್ಮಿಂದ ಹಣವನ್ನು ಪಡೆದಿದ್ದು, ಸಿನಿಮಾ ಮಾತ್ರ ಮಾಡುತ್ತಿಲ್ಲ ಎನ್ನುವ ಆರೋಪವನ್ನು ಮಾಡಿದ್ದರು. ಈ ವಿಷಯ ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು. ಈಗ ಇದರ ಬೆನ್ನಲ್ಲೇ ನಟ ಸುದೀಪ್ ಅವರು ಈ ವಿಚಾರವಾಗಿ ತಮ್ಮ ಮೌನ ವನ್ನು ಮುರಿದಿದ್ದಾರೆ.
ತಮ್ಮ ವಿರುದ್ಧ ಮಾಡಕಾಗಿರುವ ವಂಚನೆ ಆರೋಪದ ವಿರುದ್ಧ ನಟ ಸುದೀಪ್ ಕಾನೂನು ಹೋರಾಟವನ್ನು ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಅವರು ತಮ್ಮ ಮೇಲೆ ವಂಚನೆಯ ಆರೋಪ ಮಾಡಿರುವವರ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮ್ಮೆಯನ್ನು ಹೂಡುವುದಾಗಿಯೂ ಎಚ್ಚರಿಕೆಯನ್ನು ನೀಡಿದ್ದಾರೆ. ನಿರ್ಮಾಪಕ ಎನ್.ಕುಮಾರ್, ಎನ್.ಎಂ. ಸುರೇಶ್ ಗೆ ನೋಟಿಸ್ ನೀಡಲಾಗಿದೆ.
ಸುದೀಪ್ ಅವರು ಸಿನಿಮಾಕ್ಕೆ ಮುಂಗಣ ಹಣ ಪಡೆದು ಕಾಲ್ ಶೀಟ್ ನೀಡಿಲ್ಲ ಎಂದು ಸುದೀಪ್ ಆರೋಪ ಮಾಡಲಾಗಿತ್ತು.
ಅಲ್ಲದೇ ಒಂದು ವೇಳೆ ತಾವು ಆ ತ್ಮ ಹ ತ್ಯೆ ಏನಾದರೂ ಮಾಡಿಕೊಂಡರೇ ಸುದೀಪ್ ಅವರೇ ಕಾರಣ ಎಂದು ನಿರ್ಮಾಪಕರು ಹೇಳಿದ್ದರು. ಇದಕ್ಕೆ ಸುದೀಪ್ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿರುವಿರಿ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತುಪಡಿಸಿ. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡುವುದಕ್ಕೆ ಕಾಯುತ್ತಿದ್ದೆ. ನೋಟಿಸ್ ತಲುಪಿದ ಕೂಡಲೇ ಅದಕ್ಕೆ ಪ್ರತ್ಯುತ್ತರ ಕಳುಹಿಸಿ ಎಂದು ನಟ ಲಾಯರ್ ನೋಟೀಸ್ ನೀಡಿದ್ದಾರೆ.