ತಮಿಳು ಸಿನಿಮಾ ರಂಗದ ಸೂಪರ್ ಸ್ಟಾರ್, ದಕ್ಷಿಣ ಸಿನಿಮಾ ರಂಗದ ಹಿರಿಯ ನಟ ರಜನೀಕಾಂತ್ ನಾಯಕನಾಗಿ ಕಾಣಿಸಿಕೊಂಡಿರುವ ಜೈಲರ್ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ ಅವರ ಅಭಿಮಾನಿಗಳು. ಸಿನಿಮಾದ ಟ್ರೈಲರ್ ಬಿಡುಗಡೆ ನಂತರ ಸಿನಿಪ್ರಿಯರಲ್ಲಿ ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿದೆ. ರಜನಿಕಾಂತ್ ತಮ್ಮ ಹೊಸ ಲುಕ್ ಮತ್ತು ತನ್ನ ಸ್ಟೈಲ್ ಮೂಲಕ ಅಭಿಮಾನಿಗಳ ಮುಂದೆ ಬರುವುದಕ್ಕೆ ಸಿದ್ಧವಾಗಿದ್ದಾರೆ. ರಜನಿಕಾಂತ್ ಸಿನಿಮಾ ಆಗಿರುವ ಕಾರಣದಿಂದ ಸಿನಿಮಾ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದೆ.
ಬಹಳ ದಿನಗಳ ನಂತರ ರಜನಿಕಾಂತ್ ಅವರನ್ನು ಭರ್ಜರಿ ಆ್ಯಕ್ಷನ್ ಪಾತ್ರದಲ್ಲಿ ನೋಡಿ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೈಲರ್ ಸಿನಿಮಾದ ಟ್ರೈಲರ್ ವೈರಲ್ ಆಗುವ ಮೂಲಕ ಅಬ್ಬರವನ್ನು ಸೃಷ್ಟಿಸಿದೆ. ಈ ಸಿನಿಮಾದಲ್ಲಿ ರಜನೀಕಾಂತ್ ಅವರು ಪವರ್ ಫುಲ್ ಜೈಲರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಶತ್ರುಗಳ ವಿರುದ್ಧ ನಡೆಸುವ ಹೋರಾಟ ತೆರೆ ಮೇಲೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಈಗ ಇವೆಲ್ಲವುಗಳ ನಡುವೆ ಈ ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ನಟ ನಟಿಯರ ಸಂಭಾವನೆಯ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದನ್ನು ಮಾಡುತ್ತಿದೆ. ಹೌದು, ಜೈಲರ್ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ರಜನಿಕಾಂತ್ ಅವರು ಬರೋಬ್ಬರಿ 150 ಕೋಟಿಗಳ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಈ ಸಿನಿಮಾದಲ್ಲಿ ನಟಿಸಿರುವ ಮಲಯಾಳಂ ನಟ ಮೋಹನ್ ಲಾಲ್ ಅವರು ಬರೋಬ್ಬರಿ ಎಂಟು ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಟ ಜಾಕಿ ಶ್ರಾಫ್ ನಾಲ್ಕು ಕೋಟಿ ರೂಪಾಯಿಗಳ ಸಂಭಾವನೆಯನ್ನೂ, ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ. ಉಳಿದಂತೆ ನಟಿ ತಮನ್ನಾ ಮೂರು ಕೋಟಿ ರೂಪಾಯಿಗಳು ಹಿರಿಯ ನಟಿ ರಮ್ಯಕೃಷ್ಣ 80 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿ ಅಚ್ಚರಿ ಮೂಡಿಸಿದೆ.