ಸ್ಯಾಂಡಲ್ವುಡ್ ನಟ ಶ್ರೀನಗರ ಕಿಟ್ಟಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿನ ತಾರಾ ಬಳಗ ಸಿನಿ ಪ್ರೇಮಿಗಳಿಗೆ ಅಚ್ಚರಿಯನ್ನು ನೀಡಲಿದೆಯೆಂದು ಹಿಂದೊಮ್ಮೆ ಸಿನಿಮಾದ ನಿರ್ದೇಶಕ ನಾಗಶೇಖರ್ ಅವರು ತಿಳಿಸಿದ್ದರು. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಾಯಕನಾದರೆ ಈ ಸಿನಿಮಾದಲ್ಲಿ ನಾಯಕಿ ಯಾರಾಗುವರು ಎನ್ನುವ ಪ್ರಶ್ನೆಯೊಂದು ಎಲ್ಲರಲ್ಲೂ ಮೂಡಿತ್ತು. ಈ ಸಿನಿಮಾ ವಿಚಾರವಾಗಿ ಸ್ಯಾಂಡಲ್ವುಡ್ ಸ್ಟಾರ್ ನಟಿ ರಚಿತಾ ರಾಮ್ ಅವರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆದಿತ್ತು ಎನ್ನಲಾಗಿತ್ತು.
ಆದ್ದರಿಂದಲೇ ಬಹುತೇಕ ರಚಿತಾ ರಾಮ್ ಅವರೇ ಈ ಸಿನಿಮಾದಲ್ಲಿ ನಾಯಕಿಯಾಗುವರೆಂದು ಸುದ್ದಿಗಳು ಹರಿದಾಡಿದ್ದವು. ಇದೀಗ ಚಿತ್ರತಂಡವೇ ಪೋಸ್ಟರ್ ವೊಂದನ್ನು ರಿಲೀಸ್ ಮಾಡುವ ಮೂಲಕ ತಮ್ಮ ಸಿನಿಮಾಕ್ಕೆ ನಟಿ ರಚಿತಾ ರಾಮ್ ಅವರೇ ನಾಯಕಿ ಎನ್ನುವುದನ್ನು ಖಚಿತ ಪಡಿಸಿದೆ. ಈ ಸಿನಿಮಾದ ಮತ್ತೊಂದು ವಿಶೇಷತೆ ಏನೆಂದರೆ
ಈ ಸಿನಿಮಾದಲ್ಲಿ ದಕ್ಷಿಣದ ಹಿರಿಯ ಸ್ಟಾರ್ ನಟರಾದ ಪ್ರಕಾಶ್ ರೈ ಮತ್ತು ರಮ್ಯಾಕೃಷ್ಣ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಅವರು ಯಾವ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನುವುದನ್ನು ನಾಗಶೇಖರ್ ಅವರು ಹೇಳಿಲ್ಲವಾದರೂ ಅವರು ನಟಿಸುವುದು ಖಚಿತ ಎನ್ನಲಾಗಿದೆ. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ಮೋಹಕ ತಾರೆ ರಮ್ಯಾ ಜೋಡಿಯಾಗಿ ನಟಿಸಿದ್ದರು. ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡಿತ್ತು. ಆದರೆ ಈಗ ಸಂಜು ವೆಡ್ಸ್ ಗೀತಾ 2 ರಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಮುಂದುವರೆದಿದ್ದು ನಾಯಕಿ ಪಾತ್ರಕ್ಕೆ ಈ ಬಾರಿ ರಮ್ಯ ಬದಲಾಗಿ ರಚಿತಾ ರಾಮ್ ಎಂಟ್ರಿ ನೀಡಿದ್ದಾರೆ.