ರಷ್ಯಾ ಹೊಸ ಕಾನೂನಿಗೆ ಸಹಿ ಹಾಕುವ ಮೂಲಕ ಎಲ್ ಜಿ ಬಿ ಟಿ ಕ್ಯೂ ಸಮುದಾಯಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೋಮವಾರದಂದು ಹೊಸ ಕಾನೂನಿಗೆ ಸಹಿಯನ್ನು ಮಾಡಿದ್ದಾರೆ. ಈಗ ಇದು ಲಿಂಗ ದೃಢೀಕರಣ ಕಾರ್ಯ ವಿಧಾನಗಳನ್ನು ಕಾನೂನುಬಾಹಿರಗೊಳಿಸುವ ಅಂತಿಮ ಹಂತಕ್ಕೆ ಬಂದು ಸೇರಿದೆ. ಈಗಾಗಲೇ ರಷ್ಯಾದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದ LGBTQ ಸಮುದಾಯಕ್ಕೆ ಈಗ ಮತ್ತೊಂದು ಹೊಡೆತ ಬಿದ್ದಂತಾಗಿದೆ.
ರಷ್ಯಾದ ಸಂಸತ್ತನ ಉಭಯ ಸದನಗಳಲ್ಲೂ ಈ ಮಸೂದಗೆ ಸರ್ವಾನುಮತದ ಅಂಗೀಕಾರ ದೊರೆತಿದ್ದು, ಮಸೂದೆಗೆ ಸಹಿ ಬಿದ್ದಿದೆ. ಈ ಮಸೂದೆ ಏನು ಹೇಳುತ್ತದೆ ಎನ್ನುವುದಾದರೆ, ಯಾವುದೇ ವ್ಯಕ್ತಿಯ ಲಿಂಗವನ್ನು ಬದಲಿಸುವ ಗುರಿಯನ್ನು ಹೊಂದಿರುವಂತಹ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ನಿಷೇಧಿಸಲಾಗಿದೆ. ಅಲ್ಲದೇ ಅಧಿಕೃತ ದಾಖಲೆಗಳು ಮತ್ತು ಸಾರ್ವಜನಿಕ ದಾಖಲೆಗಳಲ್ಲೂ ಕೂಡಾ ಲಿಂಗ ಬದಲಾವಣೆಗೆ ನಿಷೇಧವನ್ನು ಹೇರಲಾಗಿದೆ.
ಆದರೆ, ಜನ್ಮಜಾತ ವೈಪರೀತ್ಯಗಳಿಗೆ ಚಿಕಿತ್ಸೆ ನೀಡುವುದಕ್ಮೆ ಮಾತ್ರವೇ ವೈದ್ಯಕೀಯ ಮಧ್ಯಸ್ಥಿಕೆಗೆ ವಿನಾಯಿತಿಯನ್ನು ಒದಗಿಸಲಾಗಿದೆ.
ಈ ಮಸೂದೆಯ ಪ್ರಕಾರ ಒಬ್ಬ ವ್ಯಕ್ತಿಯು ಲಿಂಗವನ್ನು ಬದಲಾಯಿಸಿದ ಮದುವೆಗಳನ್ನು ಸಹಾ ರದ್ದುಗೊಳಿಸುತ್ತದೆ. ತೃತೀಯ ಲಿಂಗಿಗಳು ಸಾಕು ತಂದೆ ಅಥವಾ ತಾಯಿ ಹಾಗೂ ದತ್ತು ಪಡೆದ ಪೋಷಕರಾಗದಂತೆಯೂ ನಿರ್ಬಂಧ ಹೇರಲಾಗಿದೆ.