ಭೋಜ್‌ಪುರಿ ಸಿನಿಮಾಗಳ ಸ್ಟಾರ್ ನಟ, ಬಾಲಿವುಡ್ ಮತ್ತು ದಕ್ಷಿಣ ಸಿನಿಮಾಗಳಲ್ಲೂ ನಟಿಸಿ ಹೆಸರನ್ನು ಮಾಡಿರುವ ನಟ, ಬಿಜೆಪಿ ಸಂಸದ ಕೂಡಾ ಆಗಿರುವ ರವಿ ಕಿಶನ್ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ರವಿ ಕಿಶನ್ ಸಿನಿಮಾಗಳಿಂದ ದೂರವಿದ್ದರೂ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಸಹಾ ಒಂದಲ್ಲಾ ಒಂದು ರೀತಿಯಲ್ಲಿ ಸಂಪರ್ಕದಲ್ಲಿದ್ದಾರೆ.
ಇತ್ತೀಚೆಗಷ್ಟೇ ರವಿ ಕಿಶನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಒಂದು ಬಹಳ ಸಂತಸದ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ನಟ ತನ್ನ ಮಗಳು ಇಶಿತಾ ಶುಕ್ಲಾ ಭಾರತದ ಡಿಫೆನ್ಸ್ ನ ಒಂದು ಭಾಗವಾಗಲಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಮಗಳು ಅಗ್ನಿಪಥ್ ಯೋಜನೆ ಮೂಲಕ ಇಶಿತಾ ಭಾರತೀಯ ಸೇನೆಗೆ ಸೇರಲಿದ್ದಾರೆಂದು ಖುಷಿ ಪಟ್ಟಿದ್ದಾರೆ. ನಟ ಈ ವಿಚಾರವನ್ನು ಬಹಿರಂಗಪಡಿಸಿದ ನಂತರ, ಎಲ್ಲರೂ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸುತ್ತಿದ್ದಾರೆ.
ರವಿ ಕಿಶನ್ ಅವರ ಪುತ್ರಿ ಇಶಿತಾಗೆ ಕೇವಲ 21 ವರ್ಷ ವಯಸ್ಸು. ಹೀಗಿರುವಾಗ ಈ ಕಿರಿಯ ವಯಸ್ಸಿನಲ್ಲೇ ಅವರ ದೇಶಸೇವೆ ಮಾಡುವ ನಿರ್ಧಾರ ಈಗಅಭಿಮಾನಿಗಳು ಮತ್ತು ಜನರ ಮನಗೆದ್ದಿದೆ. ಈ ವರ್ಷ ಜನವರಿ 26 ರಂದು ನಡೆದ ಪರೇಡ್‌ನಲ್ಲಿ ಇಶಿತಾ ಕೂಡಾ ಭಾಗವಹಿಸಿದ್ದರು. ಎನ್‌ಸಿಸಿಯಿಂದ ಪರೇಡ್‌ನಲ್ಲಿ ಭಾಗವಹಿಸಿದ ಸುಮಾರು 148 ಮಹಿಳೆಯರಲ್ಲಿ ಇಶಿತಾ ಕೂಡಾ ಒಬ್ಬರಾಗಿದ್ದರು.
ಭಾರತ ಸರ್ಕಾರದ ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಇಶಿತಾ ಮೂಲಕ ಸಶಸ್ತ್ರ ಪಡೆಗೆ ಸೇರಿದ್ದಾರೆ. ಈ ಯೋಜನೆಯ ಪ್ರಕಾರ, ಭಾರತದ 17 ರಿಂದ 21 ವಯಸ್ಸಿನ ನಡುವಿನ ಯುವ ಜನತೆ ನೋಂದಾಯಿಸಿಕೊಳ್ಳಬೇಕು. ಇಶಿತಾ ಅವರು ಆರು ತಿಂಗಳ ತರಬೇತಿ ಮತ್ತು 3.5 ವರ್ಷಗಳ ನಿಯೋಜನೆಯನ್ನೂ ಸೇರಿದಂತೆ ನಾಲ್ಕು ವರ್ಷಗಳ ಅವಧಿಗೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಈ ಅವಧಿ ಪೂರ್ಣಗೊಂಡ ನಂತರ ಇವರು ಅಗ್ನಿವೀರರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಬೇಕು.