ದಕ್ಷಿಣ ಸಿನಿಮಾ ರಂಗದ ಜನಪ್ರಿಯ ನಟ ಪ್ರಕಾಶ್ ರೈ ಅವರು ತಮ್ಮ ಪಾತ್ರಗಳು, ಅದ್ಭುತ ನಟನೆಯ ಮೂಲಕ ಸಾಕಷ್ಟು ದೊಡ್ಡ ಹೆಸರನ್ನು ಪಡೆದಿರುವ ಮತ್ತು ಅಭಿಮಾನಿ ಬಳಗವನ್ನು ಪಡೆದಿರುವ ನಟರಾಗಿದ್ದಾರೆ. ಪ್ರಕಾಶ್ ರೈ ಅವರು ರಾಷ್ಟ್ರ ರಾಜಕಾರಣ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರ ಪೋಸ್ಟ್ ಗಳು ದೊಡ್ಡ ಚರ್ಚೆಗೆ ಕಾರಣವಾಗುತ್ತದೆ. ಇತ್ತಚಿಗೆ ನಟ ಕೊಲ್ಲೂರಿನಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದ ಫೋಟೋ ವೈರಲ್ ಆಗಿತ್ತು.
ಪ್ರಕಾಶ್ ರೈ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೇಲೆ ಎಡಪಂಥೀಯ ಸಿದ್ಧಾಂತಗಳಿಂದ ಜನಪ್ರಿಯತೆ ಪಡೆದಿರುವ ನಟನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಈ ವಿಚಾರವಾಗಿ ಇದೀಗ ನಟ ಪ್ರಕಾಶ್ ರೈ ಅವರು ಮಾತನಾಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ನಟ ಪ್ರಕಾಶ್ ರೈ ಅವರು ಮೊದಲ ಬಾರಿಗೆ ಚಂಡಿಕಾ ಹೋಮದಲ್ಲಿ ಭಾಗಿಯಾದ್ದ ವಿಚಾರಕ್ಕೆ ತಮ್ಮ ಉತ್ತರವನ್ನು ಕೊಟ್ಟಿದ್ದಾರೆ.
ನಟ ಮಾತನಾಡುತ್ತಾ, ನಾನು ಹೋಮ ಹವನದಲ್ಲಿ ಕೂರುವುದಿಲ್ಲ ಎಂಬುದು ಬೇರೆ ವಿಚಾರ. ಆದರೆ, ನನ್ನ ಪತ್ನಿ ಒಪ್ಪಿದ್ದನ್ನು ನಾನು ಗೌರವಿಸಬೇಕಾಗಿದೆ. ಆದ ಕಾರಣ ನಾವು ಪೂಜೆ ಮಾಡಿಸಿದ್ದೇವೆ. ನಾನು ನನ್ನ ಪತ್ನಿಯನ್ನು ಗೌರವಿಸುತ್ತೇನೆ ಎನ್ನುವ ಮೂಲಕ ಪತ್ನಿಯ ಭಾವನೆಗಳನ್ನು ಗೌರವಿಸಲು ಪೂಜೆಯಲ್ಲಿ ಭಾಗಿಯಾಗಿದ್ದಾರೆ ಸ್ಪಷ್ಟನೆಯನ್ನು ನೀಡಿದ್ದಾರೆ.