ಪಬ್ಜಿ ಗೆಳೆಯ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ನಾಲ್ಕು ಮಕ್ಕಳ ತಾಯಿ, ಪಾಕ್ ನ ಮಹಿಳೆ ಸೀಮಾ ಹೈದರ್ ವಿಚಾರ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿಯಾಗಿತ್ತು. ಸೀಮಾ ಸಂದರ್ಶನಗಳನ್ನು ಮಾಡಲಾಯಿತು ಮತ್ತು ವಿಚಾರಣೆ ಸಹಾ ನಡೆದಿತ್ತು. ಸೀಮಾ ಹೈದರ್ ಮತ್ತು ಸಚಿನ್ ಪ್ರೇಮಕಥೆಯು ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯೇನಿಲ್ಲ. ಪಬ್ಜಿ ಆಟದಿಂದ ಆರಂಭವಾದ ಸೀಮಾ ಸಚಿನ್ ಸ್ನೇಹ, ಪ್ರೇಮವಾಗಿ ಅನಂತರ ಆಗಿದ್ದು ಚರ್ಚೆಯ ವಿಷಯವಾಗಿದೆ.
ಸಚಿನ್ ಮತ್ತು ಸೀಮಾ ಪ್ರಸ್ತುತ ಯವುದೇ ಕೆಲಸಕ್ಕೆ ಹೋಗದ ಕಾರಣ ಅವರ ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ನಡುವೆ ಸೀಮಾಗೆ ಬಾಲಿವುಡ್ ಸಿನಿಮಾವೊಂದರಲ್ಲಿ ನಾಯಕಿಯಾಗುವ ಅವಕಾಶವೊಂದು ಅರಸಿ ಬಂದಿದೆ. ನಿರ್ಮಾಪಕ ಅಮಿತ್ ಜಾನಿ ಇತ್ತೀಚೆಗಷ್ಟೇ ತಮ್ಮ ಪ್ರೊಡಕ್ಷನ್ ಹೌಸ್ ಜಾನಿ ಫೈರ್ ಫಾಕ್ಸ್ ಅನ್ನು ಆರಂಭಿಸಿದ್ದಾರೆ. ಅವರು ತಮ್ಮ ಈ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಅಮಿತ್ ಅವರು ಉದಯಪುರದಲ್ಲಿ ನಡೆದಂತಹ ಟೈಲರ್ ಕನ್ಹಯ್ಯಾ ಲಾಲ್ ಸಾಹು ಹ ತ್ಯೆ ಯ ಕುರಿತು ಚಲನಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಎ ಟೇಲರ್ ಮರ್ಡರ್ ಸ್ಟೋರಿ ಎಂದಾಗಿದ್ದು, ಈ ಸಿನಿಮಾದಲ್ಲಿ ನಟಿಸಲು ಅಮಿತ್ ಸೀಮಾಗೆ ಆಫರ್ ನೀಡಿದ್ದಾರೆ. ಸೀಮಾ ತಮ್ಮ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಸಿದ್ಧವಾಗಲಿರುವ ಸಿನಿಮಾಗಳಲ್ಲಿ ಕೆಲಸ ಮಾಡಬಹುದೆಂದು ಅಮಿತ್ ಜಾನಿ ಹೇಳಿದ್ದಾರೆ.
ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಆಕೆಗೆ ಸಂಭಾವನೆ ಸಿಗುತ್ತದೆ, ಇದರಿಂದ ಆಕೆ ತನ್ನ ಮನೆಯ ಖರ್ಚನ್ನು ನಿಭಾಯಿಸುತ್ತಾಳೆ ಮತ್ತು ಅವಳಿಗೂ ಸಹಾಯವಾಗುವುದು ಎನ್ನುವ ಮಾತನ್ನು ಹೇಳಿದ್ದಾರೆ. ಇನ್ನು ಸೀಮಾ ಈ ಆಫರ್ ಅನ್ನು ಒಪ್ಪಿ ಸಿನಿಮಾ ಮಾಡುತ್ತಾರಾ ಅಥವಾ ಇಲ್ಲವೋ ಎನ್ನುವುದು ಸದ್ಯಕ್ಕಂತೂ ಪ್ರಶ್ನೆಯಾಗಿಯೇ ಉಳಿದಿದ್ದು, ಮುಂದಿನ ದಿನಗಳಲ್ಲಿ ಇದಕ್ಕೂ ಉತ್ತರ ದೊರೆಯಲಿದೆ.