ಮಂತ್ರಾಲಯದಲ್ಲಿ 108 ಅಡಿ ಶ್ರೀ ರಾಮನ ಮೂರ್ತಿಯ ಪ್ರತಿಷ್ಠಾಪನೆಗೆ ಭೂಮಿ ಪೂಜೆಯನ್ನು ರಾಘವೇಂದ್ರ ಸ್ವಾಮಿ ಮಠದ ಶ್ರೀಗಳಿಂದ ಬಹಳ ವೈಭವವಾಗಿ ನಡೆದಿದೆ. ಸುಮಾರು 300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮನ ಪ್ರತಿಮೆಗೆ ಕೇಂದ್ರ ಸಚಿವರಾದ ಅಮಿತ್ ಶಾ ಅವರು ವರ್ಚುಯಲ್ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಂತ್ರಾಲಯದ ಪೀಠಾಧಿಪತಿಗಳಾದ ಡಾ. ಸುಭುದೇಂದ್ರ ತೀರ್ಥರು ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ.
ಆಂಧ್ರಪ್ರದೇಶದ ಸಚಿವರು ಹಾಗೂ ಉನ್ನತಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಕೂಡಾ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಅವರು ಮಾತನಾಡಿ ತಾವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ಪೂರ್ವಜನ್ಮದ ಪುಣ್ಯ ಎಂದು ಹೇಳಿದ್ದಾರೆ. ಜೈ ಶ್ರೀ ರಾಮ್ ಫೌಂಡೇಶನ್ ಆಶ್ರಯದಲ್ಲಿ ಪಂಚಲೋಹ ಮೂರ್ತಿ ನಿರ್ಮಾಣ ಕಾರ್ಯ ನಡೆಯಲಿದೆ ಎನ್ನಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷರಾದ ಸುಭುದೇಂದ್ರ ತೀರ್ಥರು ಜೈ ಶ್ರೀ ರಾಮ್ ಫೌಂಡೇಶನ್ ಸಂಸ್ಥಾಪಕರಾದ ರಾಮು, ಶ್ರೀಧರ್, ಸಚಿವ ಗುಮ್ಮನೂರು ಜಯರಾಮ್, ಬಿಜೆಪಿ ಮುಖಂಡ ಟಿ ಜಿ ವೆಂಕಟೇಶ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನೆರಡು ವರ್ಷಗಳಲ್ಲಿ ಮೂರ್ತಿಯ ತಯಾರಿ ಪೂರ್ಣಗೊಳ್ಳುವುದು ಎನ್ನಲಾಗಿದ್ದು, ನಂತರ ಮೂರ್ತಿಯ ಪ್ರತಿಷ್ಠಾಪನ ಕಾರ್ಯ ನಡೆಯಲಿದೆ ಅದಾದ ನಂತರ ಪ್ರತಿಮೆಯ ಮುಂಭಾಗದಲ್ಲಿ ವಿರಾಮ ಮಂದಿರವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದೆ.