ಕಿರಿಕ್ ಪಾರ್ಟಿ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿನ ದಿನಗಳಲ್ಲಿ ಮೊದಲಿನಂತೆ ಒಂದಲ್ಲಾ ಒಂದು ವಿಚಾರದಿಂದಾಗಿ ಸುದ್ದಿಗಳಲ್ಲಿ ಕಾಣುವುದು ಕಡಿಮೆಯಾಗಿದೆ. ಏಕೆಂದರೆ ನಟಿ ಮೊದಲಿನಷ್ಟು ಟ್ರೋಲ್ ಆಗುತ್ತಿಲ್ಲ ಎನ್ನುವುದು ಸಹಾ ವಾಸ್ತವದ ವಿಚಾರವಾಗಿದೆ. ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಒಂದರ ನಂತರ ಮತ್ತೊಂದು ಎನ್ನುವಂತೆ ಹೊಸ ಹೊಸ ಅವಕಾಶಗಳನ್ನು ಪಡೆದುಕೊಂಡು ಸಿನಿಮಾಗಳ ಚಿತ್ರೀಕರಣದಲ್ಲಿ ಸಕ್ರಿಯವಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ರಶ್ಮಿಕಾ ಶಾರೂಖ್ ಖಾನ್ ಜೊತೆಗೆ ಜಾಹೀರಾತಿನಲ್ಲಿ ನಟಿಸಲಿದ್ದಾರೆ ಎಂದು, ಅದಾರ ನಂತರ ತಮಿಳಿನ ಸ್ಟಾರ್ ನಟ ವಿಕ್ರಮ್ ಅವರ ಮುಂದಿನ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಎನ್ನುವ ಸುದ್ದಿಗಳನ್ನು ಕೇಳಿ ನಟಿಯ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದರು. ಈಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಹೊರಗೆ ಬಂದಿದೆ. ನಟಿಗೆ ತಮಿಳಿನ ಮತ್ತೊಬ್ಬ ಸ್ಟಾರ್ ಧನುಷ್ (Dhanush) ಸಿನಿಮಾಕ್ಕೆ ನಾಯಕಿಯಾಗುವ ಅವಕಾಶ ದಕ್ಕಿದೆ ಎನ್ನಲಾಗಿದೆ.
ಧನುಷ್ ಅವರ 51 ನೇ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಎನ್ನುವ ವಿಷಯವನ್ನು ಸ್ವತಃ ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲವ್ ಸ್ಟೋರಿ ಸಿನಿಮಾ ಖ್ಯಾತಿಯ ಶೇಖರ್ ಕಮ್ಮಲ ಈ ಸಿನಿಮಾ ನಿರ್ದೇಶನ ಮಾಡಲಿದ್ದು, ಇದೊಂದು ವಿಭಿನ್ನ ಕಥೆ ಎನ್ನಲಾಗಿದ್ದು, ಅನಿಕಾ ಈ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.