ಮಣಿಪುರದಲ್ಲಿ ನಡೆಯುತ್ತಿದ್ದ ಹಿಂ ಸಾ ಚಾ ರ ದ ವಿಚಾರವಾಗಿ ಇಡೀ ದೇಶದ ಜನರು ವಿಷಾದವನ್ನು ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಾಗಲೇ ಕಾಂಗ್ ಪೊಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದಿರುವ ಹಿಂಸಾಚಾರದ ವೇಳೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅಮಾನವೀಯವಾಗಿ ಅವರನ್ನು ಮೆರವಣಿಗೆ ಮಾಡಿರುವ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಘಟನೆಯನ್ನು ಬಾಲಿವುಡ್ ಸೆಲೆಬ್ರಿಟಿಗಳು ಖಂಡನೆ ಮಾಡಿದ್ದಾರೆ.
ಮಹಿಳೆಯರ ಮೇಲೆ ಮೆರೆದ ಇಂತಹ ದೌರ್ಜನ್ಯ ಮತ್ತು ಬೆತ್ತಲು ಮೆರವಣಿಗೆಯನ್ನು ಮಾಡಿದ ಪಾತಕಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರಿಗೆ ಘೋರವಾದ ಶಿಕ್ಷೆಯನ್ನು ನೀಡಬೇಕೆಂದು ಬಾಲಿವುಡ್ ನ ನಟ ನಟಿಯರು ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಊರ್ಮಿಳಾ ಮಾತೊಂಡ್ಕರ್, ರಿತೇಶ್ ದೇಶ್ಮುಖ್, ಸೋನು ಸೂದ್, ಕಿಯಾರ ಆಡ್ವಾಣಿ, ವಿವೇಕ್ ಅಗ್ನಿಹೋತ್ರಿ ಮೊದಲಾದವರು ಟ್ವೀಟ್ ಮಾಡಿದ್ದಾರೆ.
ದೇಶೀಯ ಬುಡಕಟ್ಟು ನಾಯಕರ ವೇದಿಕೆ’ (ಐಟಿಎಲ್‌ಎಫ್) ಗುರುವಾರ ಹಮ್ಮಿಕೊಂಡಿದ್ದಂತಹ ಪ್ರತಿಭಟನಾ ಮೆರವಣಿಗೆಯ ಒಂದು ದಿನ ಮೊದಲು ಈ ವೀಡಿಯೋ ವನ್ನು ಬಹಿರಂಗ ಮಾಡಲಾಗಿದೆ. ವೀಡಿಯೋದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಭತ್ತದ ಗದ್ದೆಗೆ ಕರೆದೊಯ್ಯುತ್ತಿದ್ದು, ಮಹಿಳೆಯರು ಸಹಾಯಕ್ಕಾಗಿ ಅಂಗಲಾಚಿದರೂ ಸಹಾ ಕರುಣೆ ತೋರದೇ ಅಮಾನವೀಯವಾಗಿ ನಡೆದುಕೊಂಡಿರುವುದು ಕಂಡು ಬಂದಿದೆ.