ಬಿಗ್ ಬಾಸ್ ಕನ್ನಡದ ಕಳೆದ ಸೀಸನ್ ನಲ್ಲಿ ಜೋಡಿಗಳಂತೆ ಕಂಡು ಸಿಕ್ಕಾಪಟ್ಟೆ ಸುದ್ದಿಯಾದವರು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಹಾಗೂ ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಜೋಡಿ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ರಾಕೇಶ್ ಅಡಿಗ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅವರು ತಮ್ಮ ಹೊಸ ಪ್ರಾಜೆಕ್ಟ್ ಗಳ ವಿಷಯವಾಗಿ ಮತ್ತು ತಮ್ಮ ಯೂಟ್ಯೂಬ್ ಚಾನೆಲ್ ನ ವಿಷಯದಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ ಎನ್ನಲಾಗಿದೆ. ಇವೆಲ್ಲವುಗಳ ನಡುವೆ ಮಾಧ್ಯಮವೊಂದರ ಸಂದರ್ಶನದಲ್ಲಿ ರಾಕೇಶ್ ಅಡಿಗ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ರಾಕಿ ಮತ್ತು ಅಮ್ಮು ಜೋಡಿ ನೋಡುಗರ ವಿಶೇಷ ಗಮನವನ್ನು ಸೆಡೆದಿತ್ತು. ಇವರ ನಡುವಿನ ಸ್ನೇಹ ಮತ್ತು ಆತ್ಮೀಯತೆಯನ್ನು ನೋಡಿ ಜನರು ಇವರಿಬ್ಬರ ನಡುವೆ ಸ್ನೇಹಕ್ಕೂ ಮಿಗಿಲಾದ ಬೇರೇನೋ ವಿಷಯ ಖಂಡಿತ ಇದೆ ಅಂತ ಮಾತನಾಡಿಕೊಂಡಿದ್ದು ಉಂಟು. ಈಗ ಇದೇ ವಿಚಾರವಾಗಿ ರಾಕೇಶ್ ಅಡಿಗ ಉತ್ತರವನ್ನು ನೀಡಿದ್ದಾರೆ. ರಾಕೇಶ್ ಅವರು ಮುಂದಿನ ದಿನಗಳಲ್ಲಿ ಅಮೂಲ್ಯ ಗೌಡ ಅವರನ್ನು ಮದುವೆ ಆಗ್ತಾರಾ ಅನ್ನೋ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ ರಾಕೇಶ್ ಅಡಿಗ.
ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಹೊರಗಡೆ ನಮ್ಮಿಬ್ಬರ ಹೆಸರಿನ ಫ್ಯಾನ್ ಪೇಜ್ ಆಗುತ್ತೆ ಅಂತ ಮತ್ತು ಟ್ರೋಲ್ ಮಾಡ್ತಾರೆ ಅಂತ ನಮಗೆ ಐಡಿಯಾ ಇರಲಿಲ್ಲ ನಮ್ಮನ್ನು ನೋಡಿ ಇವರು ಮದುವೆಯಾದರೆ ಚೆನ್ನಾಗಿರುತ್ತದೆ ಅಂತ ಅಭಿಮಾನಿಗಳಿಗೆ ಅನಿಸೋದು ಸಹಜ. ಆದರೆ ನಮ್ಮಿಬ್ಬರಲ್ಲಿ ಆ ಭಾವನೆ ಇಲ್ಲ . ನಮ್ಮ ಟ್ರೋಲ್ ಗಳನ್ನು ನೋಡಿ ನಾವೇ ನಕ್ಕಿದ್ದೇವೆ. ಆದರೆ ಖಂಡಿತ ನಮ್ಮ ನಡುವೆ ಅಂತದೇನೂ ಇಲ್ಲ ಎಂದು ರಾಕೇಶ್ ಅಡಿಗ ತಮ್ಮ ಮತ್ತು ಅಮೂಲ್ಯ ಗೌಡ ವಿಚಾರದಲ್ಲಿ ಹರಡಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.