ರಾಜ್ಯದಲ್ಲಿ ಜನರು ಈಗಾಗಲೇ ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ , ಮಾದ್ಯಮಗಳ ಮುಂದೆ ಈ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ವಿದ್ಯುತ್, ತರಕಾರಿ, ಅಕ್ಕಿ, ಬೇಳೆ ಕಾಳುಗಳ ಬೆಲೆಗಳು ಸಾಮಾನ್ಯ ಜನರನ್ನು ಚಿಂತೆಗೀಡು ಮಾಡಿವೆ, ಬೆಲೆ ಏರಿಕೆಯ ಬಿಸಿ ಶ್ರೀಸಾಮಾನ್ಯನನ್ನು ಬಾಧಿಸುತ್ತಿದೆ. ಈಗ ಈ ಬೆಲೆ ಏರಿಕೆಯ ಪರಿಣಾಮವು ಹೊಟೇಲ್ ಉದ್ಯಮದ ಮೇಲೂ ಆಗಿದೆ. ಇವೆಲ್ಲವುಗಳ ಜೊತೆಗೆ ವಿದ್ಯುತ್, ಹಾಲಿನ ದರ ಏರಿಕೆ ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವಂತಾಗಿದೆ.
ಬೆಲೆ ಏರಿಕೆಯು ಹೊಟೆಲ್ ಮಾಲೀಕರ ಚಿಂತೆಗೆ ಕಾರಣವಾಗಿದೆ. ಬೆಲೆ ಏರಿಕೆಯಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಈಗ ಹೊಟೇಲ್ ಗಳಲ್ಲಿ ಊಟ, ತಿಂಡಿ, ಟೀ , ಕಾಫಿ ಬೆಲೆಯಲ್ಲಿ ಏರಿಕೆ ಮಾಡುವ ಸಂಭವವಿದ್ದು ಆಗಸ್ಟ್ 1 ರಿಂದ ಬೆಲೆ ಏರಿಕೆಯಾಗುವ ಸಾದ್ಯತೆಗಳು ದಟ್ಟವಾಗಿದೆ.
ಅಂದರೆ ಈಗ ಇರುವ ದರಗಳನ್ನು ಪರಿಷ್ಕೃತಗೊಳಿಸಿ ಹೊಸ ದರಗಳನ್ನು ಪ್ರಕಟಿಸುವ ಸಾಧ್ಯತೆಗಳು ಹೆಚ್ಚಾಗಿದೆ.
ನಿನ್ನೆಯಷ್ಟೇ ನಂದಿನಿ ಹಾಲಿನ ದರವನ್ನು ಲೀಟರ್ ಗೆ ಮೂರು ರೂಪಾಯಿಗಳಷ್ಟು ಹೆಚ್ಚು ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎನ್ನುವ ವಿಚಾರ ಸುದ್ದಿಯಾಗಿ ಇದಕ್ಕೆ ಸಾರ್ವಜನಿಕ ವಲಯದಿಂದ ಸಾಕಷ್ಟು ಅಸಮಾಧಾನದ ಮಾತುಗಳು ಕೇಳಿ ಬಂದಿವೆ. ಹಾಲಿನ ದರ ಏರಿಕೆಯಾಗಿರುವುದರಿಂದ ಸಹಜವಾಗಿಯೇ ಇದು ಹೋಟೆಲ್ ಗಳಲ್ಲಿ ಕಾಫಿ, ಟೀ ಗಳ ಬೆಲೆಯನ್ನು ಏರಿಸಲಿದೆ ಎನ್ನುವುದು ಅನೇಕರ ಬೇಸರಕ್ಕೆ ಕಾರಣವಾಗಲಿದೆ.