Home » ಶುರುವಾಯ್ತು ಬಿಗ್ ಬಾಸ್ 10 ರ ಲೆಕ್ಕಾಚಾರ: ಎಲ್ಲರ ಗಮನ ಸೆಳೆದಿರುವ ಬಿಗ್ ಬಾಸ್ ಆರಂಭ ಯಾವಾಗ?

ಶುರುವಾಯ್ತು ಬಿಗ್ ಬಾಸ್ 10 ರ ಲೆಕ್ಕಾಚಾರ: ಎಲ್ಲರ ಗಮನ ಸೆಳೆದಿರುವ ಬಿಗ್ ಬಾಸ್ ಆರಂಭ ಯಾವಾಗ?

by Suddi Mane
0 comment

Kannada Big Boss 10 : ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಬಿಗ್ ಬಾಸ್ ಬಹಳ ಜನಪ್ರಿಯತೆ ಪಡೆದಿರುವ ಕಾರ್ಯಕ್ರಮವಾಗಿದೆ. ಈಗಾಗಲೇ 9 ಯಶಸ್ವಿ ಸೀಸನ್ ಗಳನ್ನು ಪೂರೈಸಿರುವ ಈ ಕಾರ್ಯಕ್ರಮದ ಸುದ್ದಿಗಳು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹೌದು, ಬಿಗ್ ಬಾಸ್ ಕನ್ನಡದ ಸೀಸನ್ 10ರ ತಯಾರಿ ಬಹಳ ಜೋರಾಗಿ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ಭಾಗದಲ್ಲಿ ಹತ್ತನೇ ಸೀಸನ್ ಆರಂಭವಾಗುವ ಸಾಧ್ಯತೆಗಳಿವೆ.

ಈ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಯಾರೆಲ್ಲಾ ಬರ್ತಾರೆ ಎನ್ನುವ ಕುತೂಹಲ ಈಗಾಗಲೇ ಮೂಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಹೆಸರುಗಳು ಕೂಡಾ ಹರಿದಾಡುತ್ತಿವೆ. ಕಿರುತೆರೆಯ ಸೀರಿಯಲ್ ಗಳಿಂದ ಹಿಡಿದು ಸೋಶಿಯಲ್ ಮೀಡಿಯಾಗಳ ಸ್ಟಾರ್ ಗಳು ಹಾಗೂ ಕಾಂಟ್ರವರ್ಸಿಗಳ ಮೂಲಕ ಸುದ್ದಿಯಾದವರ ಹೆಸರುಗಳು ಸಂಭವನೀಯ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

9 ಸೀಸನ್ ಗಳನ್ನು ಬಹಳ ಯಶಸ್ವಿಯಾಗಿ ನಿರೂಪಣೆ ಮಾಡಿರುವ ಕಿಚ್ಚ ಸುದೀಪ್ ಅವರು ಈ ಬಾರಿ 10ನೇ ಸೀಸನ್ ಅನ್ನು ನಿರೂಪಣೆ ಮಾಡಲಿದ್ದಾರೆ. ಇನ್ನು ಬಿಗ್ ಬಾಸ್ ಪ್ರಸಾರ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಕಿರುತೆರೆಯಲ್ಲಿ ಒಂದಷ್ಟು ಧಾರಾವಾಹಿಗಳು ಕೊನೆಯ ಹಂತ ತಲುಪಿ ಮುಗಿಯಲಿದೆ. ಪ್ರಸ್ತುತ ಪ್ರಸಾರವಾಗುತ್ತಿರುವ ಸೀರಿಯಲ್ ಗಳಲ್ಲಿ ಯಾವ ಸೀರಿಯಲ್ ಕೊನೆಯಾಗಲಿದೆ ಎನ್ನುವ ಕುತೂಹಲ ಕೂಡಾ ಪ್ರೇಕ್ಷಕರಲ್ಲಿ ಇದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies