Prakash Raj : ತಮ್ಮ ನಟನೆಯಿಂದ ಬಹುಭಾಷಾ ನಟನಾಗಿ ಜನಪ್ರಿಯತೆ ಪಡೆದಿರುವ ನಟ ಪ್ರಕಾಶ್ ರಾಜ್ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅವರ ನಟನೆಯನ್ನು ಮೆಚ್ಚುವ ಸಿನಿ ಪ್ರೇಮಿಗಳು ಇದ್ದಾರೆ. ಆದರೆ ಸಿನಿಮಾದಿಂದ ಹೊರತಾಗಿ ಅವರ ವಿಚಾರಧಾರೆಗಳು ಬಹಳಷ್ಟು ಸಂದರ್ಭದಲ್ಲಿ ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗುವುದರಿಂದ ಅವರನ್ನು ವಿರೋಧಿಸುವವರ ಸಂಖ್ಯೆ ಕೂಡಾ ಕಡಿಮೆ ಏನಿಲ್ಲ.
ರಾಜಕೀಯವಾಗಿ ಪ್ರಕಾಶ್ ರಾಜ್ (Prakash Raj) ಅವರ ಅಭಿಪ್ರಾಯಗಳನ್ನು ಟೀಕೆ ಮಾಡುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಇಡೀ ದೇಶವೇ ಭಾರತದ ಕನಸು ಎಂದು ಕರೆಯುತ್ತಿರುವ ಚಂದ್ರಯಾನ 3 ರ ಯಶಸ್ಸಿಗೆ ಕ್ಷಣಗಣನೆ ಮಾಡುವಾಗಲೇ, ಇನ್ನೇನು ಆ ಕನಸು ನನಸಾಗಲಿದೆ ಎನ್ನುವಾಗಲೇ, ಪ್ರಕಾಶ್ ರೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಾರ್ಟೂನ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ವ್ಯಕ್ತಿಯೊಬ್ಬರು ಚಹಾ ಮಗಚುವ ಕಾರ್ಟೂನ್ ಒಂದರ ಫೋಟೋವನ್ನು ಶೇರ್ ಮಾಡಿದ್ದಾರೆ
ಫೋಟೋ ಶೇರ್ ಮಾಡಿದ ನಟ ಶೀರ್ಷಿಕೆಯಲ್ಲಿ, “ತಾಜಾ ಸುದ್ದಿ, ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಬರೆದುಕೊಂಡಿದ್ದು ಇದನ್ನು ನೋಡಿದ ಅನೇಕ ಮಂದಿ ನೆಟ್ಟಿಗರು ನಟನನ್ನು ಟೀಕೆ ಮಾಡುತ್ತಿದ್ದಾರೆ. ಭಾರತದ ಕನಸಾದ ಚಂದ್ರಯಾನ ಮೂರರ ಬಗ್ಗೆ ವ್ಯಂಗ್ಯ ಮಾಡಿದ್ದನ್ನು ನೋಡಿ ನಟನ ಮೇಲೆ ನೆಟ್ಟಿಗರು ಸಿಟ್ಟಾಗಿದ್ದಾರೆ.

ನಟನ ಪೋಸ್ಟ್ ಗೆ ಪ್ರತಿಕ್ರಿಯೆ ಕೊಟ್ಟವರು, ಇದು ನಿಮ್ಮ ಕುರುಡು ದ್ವೇಷ ಎಂದಿದ್ದಾರೆ. ಚಂದ್ರಯಾನ ಮಿಷನ್ ಬಿಜೆಪಿಯಿಂದ ಬಂದಿದ್ದಲ್ಲ, ಅದು ಬಂದಿರುವುದು ಇಸ್ರೋದಿಂದ. ಈ ಯೋಜನೆ ಯಶಸ್ಸನ್ನು ಪಡೆದುಕೊಂಡರೆ ಅದು ಯಾವುದೇ ಪಕ್ಷದ ಯಶಸ್ಸಲ್ಲ, ಭಾರತದ ಯಶಸ್ಸು ಎಂದು ಒಬ್ಬರು ಟ್ವೀಟ್ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಐತಿಹಾಸಿಕ ಕ್ಷಣವಾಗಿದೆ. ಇಂತಹ ಸಾಧನೆ ಮಾಡುತ್ತಿರುವವರಲ್ಲಿ ನಾವು ನಾಲ್ಕನೆಯವರು. ಇದರಲ್ಲಿ ಇರುವುದು ನಮ್ಮದೇ ಜನ ಹಾಗೂ ತಂತ್ರಜ್ಞಾನವಾಗಿದೆ. ಮೋದಿಯವರ ಮೇಲಿನ ಕುರುಡು ದ್ವೇಷದಿಂದ ಚಂದ್ರಯಾನ ಮೂರನ್ನು ಅಪಹಾಸ್ಯ ಮಾಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು. ಇದನ್ನು ಯಶಸ್ವಿಗೊಳಿಸಲು ತಮ್ಮ ಜೀವಮಾನದ ವರ್ಷಗಳನ್ನು ಹಾಕಿರುವ ನಮ್ಮ ವಿಜ್ಞಾನಿಗಳನ್ನು ನೀವು ಅಪಹಾಸ್ಯ ಮಾಡುತ್ತಿರುವಿರಿ ಎಂದು ಟ್ವೀಟ್ ಮಾಡುವ ಮೂಲಕ ನೆಟ್ಟಿಗರು ಪರ್ವ ನಟ ಪ್ರಕಾಶ್ ರೈ ಮೇಲೆ ಆಕ್ರೋಶವನ್ನು ಹೊರಹಾಕಿದ್ದಾರೆ.