ಜನಗಳಿಗೋಷ್ಕರ ಯಾರನ್ನ ಬೇಕಾದ್ರು ಕಳ್ಕೊತೀನಿ ಆದ್ರೆ ಜನಗಳನ್ನೆ ಕಳಕೊಳ್ಳೋದಿಲ್ಲ ಈ ಡೈಲಾಗ್ ಸಿನಿಮಾದ ಅತಿ ಮುಖ್ಯವಾದ ಸನ್ನಿವೇಶದಲ್ಲಿ ಬರುತ್ತೆ ಆದ್ರೆ ಇಡೀ ಸಿನಿಮಾದ ಅರ್ಥ ಈ ಸಂಭಾಷಣೆಯಲ್ಲೇ ಅಡಗಿದೆ.! ಒಂದು ಸಿನಿಮಾನ ಅದರಲ್ಲೂ ಮಾಸ್ ಸಿನಿಮಾನ ಹೇಗೆ ಮಾಡಬೇಕು ಮುಖ್ಯವಾಗಿ ಸಿನಿಪ್ರೇಕ್ಷಕರಿಗೆ ಅಭಿಮಾನಿ ವರ್ಗಕ್ಕೆ ಹೇಗೆ ತೋರಿಸಬೇಕು ಅಂತ ನಿರ್ದೇಶಕ ನರ್ತನ್ ಚೆನ್ನಾಗೆ ಅರ್ಥ ಮಾಡಿಕೊಂಡಿದ್ದಾರೆ.! ಭೈರತಿ ರಣಗಲ್ ಪ್ರೀಕ್ವೆಲ್ ಸಿನಿಮಾ ಅಕ್ಷರಶಃ ಮಾಸ್ ಅವತರಾದಲ್ಲಿ ಸಿನಿಪ್ರಿಯರು ರೋಚಕ ಅನುಭವ ಪಡೆಯುವಂತೆ ಮಾಡುತ್ತದೆ.! ರೋಣಾಪುರದ
ಸಮಸ್ಯೆಗಳಿಗಾಗಿ ಅಧಿಕಾರಿಗಳ ಕಛೇರಿಗೆ ಬೆಂಕಿ ಹಾಕುವ, ಬಡ ಜನರಿಗಾಗಿ ನ್ಯಾಯಾಲಯದಲ್ಲಿ ಹೋರಾಡುವ ಅನ್ಯಾಯದ ಲೋಕದಲ್ಲಿ ಕ್ರೌರ್ಯದ ಹಾದಿ ಹಿಡಿಯುವ,ತಂಗಿ ಎಳೆದುಕೊಂಡ ಹೋದ ಪೋಲೀಸ್ ಠಾಣೆಗೆ ಬೆಂಕಿ ಹಾಕುವ , ಹಣದ ಆಸೆಗಾಗಿ ಮೆಡಿಕಲ್ ಮಾಫಿಯಾ ಮಾಡುವ ತಂಗಿ ಗಂಡನನ್ನೇ ಕತ್ತರಿಸಿ ಬೀಸಾಕುವ ಭೈರತಿ ರಣಗಲ್ ಅವತಾರದಲ್ಲಿ ಶಿವಣ್ಣನಿಗೆ ಶಿವಣ್ಣರೇ ಸಾಟಿ.! ಶಿವಣ್ಣ ಲುಕ್ , ಮ್ಯಾನರಿಸಂ , ಆ್ಯಕ್ಷನ್ ಎಲಿವೇಷನ್ಸ್ , ಆ ಲಾಂಗ್ & ಗನ್ಸ್ ಹಿಡಿಯೋ ಶೈಲಿಗೆ ಇಡೀ ಥಿಯೇಟರ್ ಬೆಂಕಿಯಂತಹ ರೋಮಾಂಚಕ ಅನುಭವ ನೀಡುತ್ತದೆ.! ಶಿವರಾಜಕುಮಾರ್ ಅವರ ಆಗಮನದ ದೃಶ್ಯಗಳು ಮದ್ಯಂತರ ವಿರಾಮದ ದೃಶ್ಯಗಳು ಹಾಗೂ ಸೆಕೆಂಡ್ ಹಾಫ್ ಅಂತು ರಣರೋಚಕ ಅನುಭವ ನೀಡುತ್ತದೆ.
KGF , ಮಫ್ತಿ ನಂತರ ಕನ್ನಡಕ್ಕೆ ಇಂತಹದ್ದೊಂದು ಪ್ಯೂರ್ ಮಾಸ್ ಸಿನಿಮಾ ಅವಶ್ಯಕತೆ ಇತ್ತು.! ತಾಂತ್ರಿಕವಾಗಿ ಭೈರತಿ ರಣಗಲ್ ತೆರೆ ಮೇಲೆ ಶ್ರೀಮಂತಿಕೆಯಿಂದ ವೈಭವಿಸಿದೆ ಎನ್ನಬಹುದು DOP ನವೀಕ್ ಕುಮಾರ್ ಕೈ ಚಳಕ , ರವಿ ಬಸ್ರೂರ್ ಅವರ ಸಂಗೀತ & ಹಿನ್ನೆಲೆ ಸಂಗೀತ ಭೈರತಿ ರಣಗಲ್ ಓಟಕ್ಕೆ ಸಾಥ್ ಕೊಡುತ್ತದೆ.! ಶಿವಣ್ಣ ಜೊತೆ ಛಾಯಾ ಸಿಂಗ್ ,ರುಕ್ಮಿಣಿ ವಸಂತ್, ಅವಿನಾಶ್ , ದೇವರಾಜ್ , ಮಧು ಗುರುಸ್ವಾಮಿ ,ರಾಹುಲ್ ಬೋಸೆ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿದ್ದಾರೆ, ಚಿತ್ರದ ಸಾಹಸ ದೃಶ್ಯಗಳು ಮೈ ನವಿರೇಳಿಸುತ್ತವೆ.! ಭೈರತಿ ರಣಗಲ್ ಮೂಲಕ ನರ್ತನ್ ಪ್ರಶಾಂತ್ ನೀಲ್ ನಂತರ ದೊಡ್ಡ ಮಟ್ಟದಲ್ಲಿ ಬ್ಯುಸಿಯಾಗಲಿದ್ದಾರೆ, ಭೈರತಿ ರಣಗಲ್ ಕನ್ನಡ ಸಿನಿಪ್ರಿಯರಿಗೆ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್ ಎಂದರೆ ಅತಿಶಯೋಕ್ತಿಯಲ್ಲ.!
ಸಿನಿಮಾ ನೋಡುವ ಪ್ರತಿಯೊಬ್ಬರು ಕುಟುಂಬ ಸಮೇತ ಭೈರತಿ ರಣಗಲ್ ಕಣ್ತುಂಬಿಕೊಳ್ಳಬಹುದು,! ಮತ್ಯಾಕೆ ತಡ ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾನ ಎಂಜಾಯ್ ಮಾಡಿ
- ಸಾಗರ್ ಮನಸು