ಭರಾಟೆ ಸುಂದರಿ ಶ್ರೀಲೀಲಾ ಸದ್ಯಕ್ಕೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿಯಾಗಿದ್ದಾರೆ. ತೆಲುಗಿನ ಸ್ಟಾರ್ ನಟರ ಜೊತೆಗೆ ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗುವ ಮೂಲಕ ಟಾಲಿವುಡ್ ಸಿನಿ ಪ್ರೇಮಿಗಳು ಮನಸ್ಸಿಗೆ ಲಗ್ಗೆ ಇಡಲು ಸಜ್ಜಾಗಿದ್ದರು, ಇದೇ ವೇಳೆ ಈಗಾಗಲೇ ಟಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ, ಕೃತಿ ಶೆಟ್ಟಿ ಮತ್ತು ಪೂಜಾ ಹೆಗ್ಡೆಗೆ ಗಟ್ಟಿ ಪೈಪೋಟಿ ನೀಡುತ್ತಿರುವುದು ಸಹಾ ವಾಸ್ತವವಾಗಿದೆ. ಈಗ ಇವೆಲ್ಲವುಗಳ ನಡುವೆ ನಟಿಯ ಕೆರಿಯರ್ ನಲ್ಲಿ ಮೊದಲ ವಿಘ್ನ ಎನ್ನುವಂತೆ ಹೊಸದೊಂದು ವಿಷಯ ಹೊರ ಬಂದಿದೆ.
ಶ್ರೀಲೀಲಾ ಅವರ ಹುಟ್ಟು ಹಬ್ಬದಂದು ನಟಿಯ ಹೊಸ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆ ಆಗಿದ್ದವು. ಇವುಗಳಲ್ಲಿ ಒಂದು ಸಿನಿಮಾ ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಸಹಾ ಸೇರಿತ್ತು. ಆದರೆ ಈಗ ಆ ಸಿನಿಮಾ ಆರಂಭಕ್ಕೂ ಮೊದಲೇ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ ಎನ್ನುವ ವಿಚಾರ ಸುದ್ದಿಯಾಗಿದೆ. ನಟ ಪವನ್ ಕಲ್ಯಾಣ್ ಅವರು ತೆಲುಗಿನ ಸ್ಟಾರ್ ನಟ, ಅವರ ಸಿನಿಮಾಗಳಿಗೆ ಬಂಡವಾಳ ಹೂಡಲು ನಿರ್ಮಾಪಕರು ಕೂಡಾ ಸಿದ್ಧವಾಗಿದ್ದಾರೆ.
ಆದರೆ ನಟ ಪವನ್ ಕಲ್ಯಾಣ್ ಅವರು ತಮ್ಮದೇ ರಾಜಕೀಯ ಪಕ್ಷವನ್ನು ಕಟ್ಟಿಕೊಂಡು, ಸಕ್ರಿಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಕಾರಣ ಸಿನಿಮಾಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದು ಸಾಧ್ಯವಾಗುತ್ತಿಲ್ಲ. ರಾಜಕೀಯ ಸಭೆ, ಸಮಾವೇಶಗಳ ನಡುವೆಯೇ ಬ್ರೋ, ಹರಿಹರ ವೀರಮಲ್ಲು, ಓಜಿ ಹಾಗೂ ಉಸ್ತಾದ್ ಭಗತ್ ಸಿಂಗ್ ಚಿತ್ರಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿರುವುದು ಅಚ್ಚರಿ ಯನ್ನು ಮೂಡಿಸಿತ್ತು.
ಆದರೆ ಈಗ ರಾಜಕೀಯ ಚಟುವಟಿಕೆಗಳ ನಡುವೆ ಸಿನಿಮಾಗಳ ಕೆಲಸವನ್ನು ಸಹಾ ನಿಭಾಯಿಸುವುದು ಕಠಿಣ ಎನ್ನುವ ಕಾರಣಕ್ಕೆ ಪವನ್ ಕಲ್ಯಾಣ್ ಅವರು ತಮ್ಮ ಉಸ್ತಾದ್ ಭಗತ್ ಸಿಂಗ್ ಸಿನಿಮಾದ ಚಿತ್ರೀಕರಣವನ್ನು ಮುಂದಿನ ವರ್ಷಕ್ಕೆ ಮುಂದೂಡಿದ್ದಾರೆ ಎನ್ನಲಾಗಿದ್ದು, ಅದೇ ಕಾರಣದಿಂದಲೇ ಈ ಸಿನಿಮಾದ ನಿರ್ದೇಶಕ ಹರೀಶ್ ಶಂಕರ್ ರವಿತೇಜಾಗೆ ಹೊಸ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪವನ್ ಕಲ್ಯಾಣ್ ಸಿನಿಮಾವನ್ನು ಮುಂದಿನ ವರ್ಷಕ್ಕೆ ಮುಂದೂಡಿರುವ ವಿಚಾರ ಕೇಳಿ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಜೋಡಿಯನ್ನು ತೆರೆಯ ಮೇಲೆ ನೋಡಬೇಕೆಂದು ಕಾಯುತ್ತಿದ್ದ ಅಭಿಮಾನಿಗಳ ಆಸೆ ಕೂಡಾ ಸದ್ಯಕ್ಕೆ ದೂರದ ಮಾತು ಎನ್ನುವುದು ಸಹಾ ಸಿನಿ ಪ್ರೇಮಿಗಳಿಗೆ ನಿರಾಸೆಯನ್ನು ಉಂಟು ಮಾಡಿದೆ.