ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳು ಸಿನಿಮಾ ಪ್ರೇಮಿಗಳನ್ನು ಮತ್ತು ನಟರ ಅಭಿಮಾನಿಗಳನ್ನು ಕೂಡಾ ಬೇಸರ ಪಡುವಂತೆ ಮಾಡುತ್ತಿವೆ. ಒಂದಷ್ಟು ಅಸಭ್ಯ, ಅಸಹ್ಯ ಎನಿಸುವಂತಹ ವಿಚಾರಗಳು ಹೊರ ಬರುತ್ತಿದ್ದು ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ಹೆಜ್ಜೆ ಹಾಕಲು ಹಿಂದೇಟು ಹಾಕುವಂತಹ ಪರಿಸ್ಥಿತಿಗಳು ನಿರ್ಮಾಣ ಆಗ್ತಿದೆ. ಸಿನಿಮಾದ ಪೋಸ್ಟರ್ ಗಳಲ್ಲಿ ಕಾಣುವ ಕೆಲವು ದೃಶ್ಯಗಳು ಸಹಜವಾಗಿಯೇ ವಿವಾದಗಳನ್ನು ಹುಟ್ಟುಹಾಕುತ್ತಿವೆ. ಈಗ ಮತ್ತೊಮ್ಮೆ ಅಂತಹುದೊಂದು ಬೆಳವಣಿಗೆ ತೆಲುಗು ಸಿನಿಮಾ ರಂಗದಲ್ಲಿ ನಡೆದಿದೆ. ಹೊಸ ಪೋಸ್ಟರ್ ಬಾರಿ ಚರ್ಚೆಗಳನ್ನು ಹುಟ್ಟುಹಾಕಿದೆ.
ತೆಲುಗಿನಲ್ಲಿ ಯುವ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ ನಟ ವಿಜಯ ದೇವರಕೊಂಡ, ಈ ನಟನ ಸಹೋದರ ಆನಂದ್ ದೇವರಕೊಂಡ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಈಗಾಗಲೇ ಒಂದಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅಣ್ಣನಿಗೆ ಸಿಕ್ಕಿದಂತಹ ಯಶಸ್ಸು ಮಾತ್ರ ಇನ್ನೂ ಆನಂದ ದೇವರಕೊಂಡ ಅವರಿಗೆ ಸಿಕ್ಕಿಲ್ಲ ಅನ್ನೋದು ಸತ್ಯವಾದ ವಿಷಯವಾಗಿದೆ. ಪ್ರಸ್ತುತ ಆನಂದ ದೇವರಕೊಂಡ ಬೇಬಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಪೋಸ್ಟರ್ ಈಗ ಒಂದು ಹೊಸ ವಿವಾದವನ್ನು ಹುಟ್ಟು ಹಾಕಿದೆ.
ಬೇಬಿ ಸಿನಿಮಾದ ಪೋಸ್ಟರ್ ನೋಡಿದಾಗ ನಾಯಕನ ಮಧ್ಯದ ಬೆರಳಿನ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಸಾಮಾನ್ಯವಾಗಿಯೇ ಮಧ್ಯದ ಬೆರಳನ್ನು ತೋರಿಸುವುದು ಅಸಭ್ಯ ಎಂದು ಭಾವಿಸಲಾಗಿದೆ. ಆ ರೀತಿ ತೋರಿಸಿದರೆ ಕಾನೂನಿನ ಮೂಲಕ ಶಿಕ್ಷೆ ಕೂಡಾ ವಿಧಿಸಲಾಗುತ್ತದೆ. ಆದರೆ ಇದೀಗ ಪೋಸ್ಟರ್ ನಲ್ಲಿ ನಾಯಕಿಯ ಫೋಟೋವನ್ನು ಯಾವ ರೀತಿ ಎಡಿಟ್ ಮಾಡಲಾಗಿದೆ ಎಂದರೆ , ನಾಯಕಿ ಮಧ್ಯದ ಬೆರಳ ಮೇಲೆ ನಿಂತಿರುವಂತೆ ತೋರಿಸಲಾಗಿದೆ.
ಪೋಸ್ಟರ್ ವೈರಲ್ ಆಗಿದ್ದು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದರೂ ಈ ಸಿನಿಮಾದ ನಾಯಕಿ ವೈಷ್ಣವಿ ಚೈತನ್ಯ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಇರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಪೋಸ್ಟರ್ ಅನ್ನು ಬದಲಾಯಿಸುವಂತೆ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಇನ್ನು ಒಂದಷ್ಟು ಜನ ತೀರಾ ಕೆಟ್ಟದಾಗಿ ಕಾಮೆಂಟ್ ಗಳನ್ನು ಮಾಡುತ್ತಾ ಚಿತ್ರ ತಂಡವನ್ನು ನಿಂದನೆ ಮಾಡುತ್ತಿದ್ದಾರೆ.