ಪ್ರಸ್ತುತ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಸಿನಿಮಾ ರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿ ಕೂಡ ಸಾಕಷ್ಟು ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿರುವ ನಟಿ ಬಾಂಬೆ, ಹೈದರಾಬಾದ್ ಮಾತ್ರವೇ ಅಲ್ಲದೇ ಚಿತ್ರೀಕರಣದ ವಿಷಯವಾಗಿ ದೇಶದ ಪ್ರಮುಖ ನಗರಗಳಲ್ಲಿ ಸತ್ತಾಡುವುದು ಸಾಮಾನ್ಯವಾಗಿದೆ. ಸಿನಿಮಾಗಳು ಮಾತ್ರವೇ ಅಲ್ಲದೇ ನಟಿ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೊಂದು ಜನಪ್ರಿಯ ಬ್ರಾಂಡ್ ಗಳ ರಾಯಭಾರಿಯಾಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ.ಸಿನಿಮಾ ರಂಗದಲ್ಲಿ ಹೊಸ ಹೊಸ ಅವಕಾಶಗಳು ಬರತೊಡಗಿದಾಗ ನಟಿಯರು ಸಾಮಾನ್ಯವಾಗಿಯೇ ತಮ್ಮ ವ್ಯವಹಾರವನ್ನು
ನೋಡಿಕೊಳ್ಳುವುದಕ್ಕಾಗಿ ಮ್ಯಾನೇಜರ್ ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ನಟಿ ರಶ್ಮಿಕಾ ಕೂಡಾ ಸಿನಿಮಾರಂಗದಲ್ಲಿ ಅವಕಾಶಗಳು ಹೆಚ್ಚಿದ ಬೆನ್ನಲ್ಲೇ ಮ್ಯಾನೇಜರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದರು. ಅವರ ಮ್ಯಾನೇಜರ್ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದರು. ಆದರೆ ಈಗ ಅದೇ ಮ್ಯಾನೇಜರ್ ನಿಂದ ನಟಿ ರಶ್ಮಿಕಾ ಮಂದಣ್ಣ ಮೋಸ ಹೋಗಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.ಹೌದು, ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಸಂಭಾವನೆ ಹಾಗೂ ಬ್ರಾಂಡ್ ಗಳ ಒಪ್ಪಂದಗಳ ಕುರಿತಾಗಿ ಎಲ್ಲಾ ವಿಷಯಗಳನ್ನು ಅವರ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಆತ ನಟಿಯ ಗಮನಕ್ಕೆ ಬಾರದ ಹಾಗೆ ದೊಡ್ಡ ಮೊತ್ತದ ಹಣವನ್ನು ತನ್ನ
ಖಾತೆಗೆ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಗೆ ಬರಬೇಕಾಗಿದ್ದ ಎಂಬತ್ತು ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನಂತೆ ಮ್ಯಾನೇಜರ್. ವಿಷಯ ತಿಳಿದ ನಟಿಯು ತಮ್ಮ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೆ ಈ ಕುರಿತಾಗಿ ನಟಿ ಯಾವುದೇ ದೂರನ್ನು ದಾಖಲಿಸಿರುವ ವರದಿಗಳು ಬಂದಿಲ್ಲ. ಸ್ಟಾರ್ ನಟಿಯಾಗಿರುವ ಕಾರಣ ರಶ್ಮಿಕಾ ತಮ್ಮ ಸಿನಿಮಾಗಳಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಇದಲ್ಲದೇ ಜಾಹೀರಾತುಗಳ ಮೂಲಕವೂ ಕೋಟಿಗಳ ಮೊತ್ತದಲ್ಲಿ ಹಣವನ್ನು ಗಳಿಸುತ್ತಿದ್ದು, ಕೆಲವೊಂದು ಉದ್ಯಮಗಳಲ್ಲಿಯೂ ಹಣವನ್ನು ಹೂಡಿಕೆ ಮಾಡಿದ್ದಾರೆ. ಈಗ ನಟಿಯ ಮ್ಯಾನೇಜರ್ ಬರೋಬ್ಬರಿ 80 ಲಕ್ಷ ರೂಪಾಯಿಗಳ ಮೋಸ ಮಾಡಿದ್ದಾನೆ ಎಂದು ಸುದ್ದಿಗಳು ಹರಿದಾಡಿದೆ.