ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಪಾರುವಿನಲ್ಲಿ ದಾಮಿನಿ ಎನ್ನುವ ಹೆಸರಿನ ಕಾಮಿಡಿ ವಿಲನ್ ಪಾತ್ರವನ್ನು ಮಾಡುವ ಮೂಲಕ ಮನೆ ಮನೆ ಮಾತಾಗಿರುವ ನಟಿ ಸಿತಾರಾ ತಾರಾ. ಈ ನಟಿಯು ತಮ್ಮ ಕಾಮಿಡಿ ಟೈಮಿಂಗ್ ನಿಂದಾಗಿ ಕಿರುತೆರೆಯ ಪ್ರೇಕ್ಷಕರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ದಾಮಿನಿ ಪಾತ್ರವು ಬಹಳಷ್ಟು ಜನರ ಅಚ್ಚುಮೆಚ್ಚಿನ ಪಾತ್ರವಾಗಿದೆ. ಸಿತಾರ ತಾರಾ ಅವರು ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೆಚ್ಚಿನ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿರುವುದು ಮಾತ್ರ ಪಾರು ಸೀರಿಯಲ್ ನ ದಾಮಿನಿ ಪಾತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜೀವನದಲ್ಲಿ ಬಹಳ ಸಂಕಷ್ಟಗಳನ್ನು ಎದುರಿಸಿ ಇಂದು ಈ ಹಂತವನ್ನು ತಲುಪಿರುವ ನಟಿ ದಾಮಿನಿ ಅವರು ಕಿರುತೆರೆಯಲ್ಲಿ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲೂ ಕೂಡಾ ಗುರುತಿಸಿಕೊಂಡಿದ್ದಾರೆ. ಕಿರಿಯ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು, ಅಜ್ಜಿಯ ಆಶ್ರಯದಲ್ಲಿ ಬೆಳೆದ ಇವರನ್ನು ಅನಂತರ ಸಾಣಿ ಹಳ್ಳಿ ಶ್ರೀಗಳು ದತ್ತು ತೆಗೆದುಕೊಂಡು ವಿದ್ಯಾಭ್ಯಾಸವನ್ನು ಕೊಡಿಸಿದರು. ಅದಕ್ಕೆ ತಾನು ಇಡೀ ಜೀವನ ಅವರಿಗೆ ಋಣಿಯಾಗಿರಬೇಕು ಎನ್ನುವ ಮಾತನ್ನು ಸಿತಾರ ಅವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿರುವ ಸಿತಾರಾ ಅವರು ಇತ್ತೀಚೆಗೆ ಕೆಲವೊಂದು ಬೋಲ್ಡ್ ಫೋಟೋಗಳನ್ನ ಹಂಚಿಕೊಂಡಿದ್ದು, ಇದನ್ನು ನೋಡಿದವರು ಸಾಕಷ್ಟು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಪಾರು ಸೀರಿಯಲ್ ದಾಮಿನಿ ಇವರೇನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಸಖತ್ ಬೋಲ್ಡ್ ಆಗಿ ನಟಿ ಪೋಸ್ ಗಳನ್ನು ನೀಡಿದ್ದಾರೆ. ನಟಿ ಹಂಚಿಕೊಂಡ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ. ಮರೂನ್ ಕಲರ್ ವೆಸ್ಟರ್ನ್ ಡ್ರೆಸ್ ಧರಿಸಿ ಸಿತಾರ ಕಾಣಿಸಿಕೊಂಡಿದ್ದಾರೆ.
ಸಿತಾರ ಅವರು instagram ನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡ ನಂತರ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದಾರೆ. ಅವರು ಹೀಗೆ ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿರುವುದು ಏಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ. ಆದರೂ ಅವರ ಹಂಚಿಕೊಂಡ ಫೋಟೋಗಳಿಗೆ ಮಾತ್ರ ಭರ್ಜರಿಯಾಗಿ ಲೈಕ್ ಗಳು ಬರುತ್ತಿವೆ. ಸಿತಾರ ಅವರ ಹೊಸ ಮಾಡ್ರನ್ ಲುಕ್ ಫೋಟೋಗಳು ಈಗ ವೈರಲ್ ಆಗುತ್ತಾ ಸಾಗಿದೆ.