Home » ಸ್ಪಂದನಾ ನಿಧನದ ವಿಚಾರವಾಗಿ ಮಾದ್ಯಮಗಳಿಗೆ ಮುಖ್ಯವಾದ ಮನವಿ ಮಾಡಿದ ನಟಿ ಮೇಘನಾ ರಾಜ್

ಸ್ಪಂದನಾ ನಿಧನದ ವಿಚಾರವಾಗಿ ಮಾದ್ಯಮಗಳಿಗೆ ಮುಖ್ಯವಾದ ಮನವಿ ಮಾಡಿದ ನಟಿ ಮೇಘನಾ ರಾಜ್

by Suddi Mane
0 comment

Meghana Raj : ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana) ಅವರ ನಿಧನದ ವಾರ್ತೆಯು ಸಿನಿಮಾ ರಂಗಕ್ಕೆ ಮಾತ್ರವೇ ಅಲ್ಲದೇ ಅನೇಕರಿಗೆ ನೋವಿನ ವಿಚಾರವಾಗಿದೆ. ಹೃದಯಾಘಾತದಿಂದ ಹಠಾತ್ ಆಗಿ ನಿಧನರಾದ ವಿಷಯ ಹೊರ ಬಂದಾಗ ಇದು ಅನೇಕರಿಗೆ ನಂಬಲಾಗದ ಸತ್ಯವಾಗಿತ್ತು. ಬಹಳಷ್ಟು ಜನ ಗಣ್ಯರು ಮತ್ತು ಸಿನಿಮಾ ಸೆಲೆಬ್ರಿಟಿಗಳು ಸ್ಪಂದನಾ ಅವರ ಅಂತಿಮ ದರ್ಶನವನ್ನು ಪಡೆಯುವುದಕ್ಕಾಗಿ ಆಗಮಿಸುತ್ತಿದ್ದಾರೆ.

ಮಾದ್ಯಮಗಳ ಮುಂದೆ ಸ್ಪಂದನಾ ಅವರ ಕುರಿತಾಗಿ ಮಾತನಾಡುತ್ತಿದ್ದಾರೆ. ಈ ವೇಳೆ ಕನ್ನಡದ ಜನಪ್ರಿಯ ನಟಿ ಮೇಘನಾ ರಾಜ್ ಅವರು ಮಾದ್ಯಮಗಳ ಮುಂದೆ ಒಂದು ಬಹಳ ಮುಖ್ಯವಾದ ವಿಚಾರವನ್ನು ಹೇಳಿ ಒಂದು ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ಸ್ಪಂದನಾ ಅವರ ಅಂತಿಮ ದರ್ಶನವನ್ನು ಮಾಡಿ ಹೊರ ಬಂದ ಮೇಘನಾ ರಾಜ್ ಅವರು ಮಾದ್ಯಮಗಳ ಮುಂದೆ ಮಾತನಾಡಿದ್ದಾರೆ.

ರಾಘು ಮತ್ತು ಸ್ಪಂದನಾ ನಮಗೆ ಬಹಳ ಆತ್ಮೀಯರು, ಏನು ನಡೆದಿದೆ ಮತ್ತು ಏನಾಗಿದೆ ಅನ್ನೋದು ಅವರ ಕುಟುಂಬಕ್ಕೆ ತಿಳಿದಿರುತ್ತೆ. ಸ್ಪಂದನಾ ಬಗ್ಗೆ ಅಪಪ್ರಚಾರವನ್ನು ಮಾಡಬೇಡಿ. ಅವರಿಗೆ ಮರ್ಯಾದೆ ಕೊಡಿ ಎಂದು ಮಾದ್ಯಮಗಳಿಗೆ ಹೇಳಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲ ಇಲ್ಲದೇ ಇರುವ ಸುದ್ದಿಗಳನ್ನು ಹರಡಬೇಡಿ ಎಂದು ಅವರು ಈ ವೇಳೆ ಮನವಿಯೊಂದನ್ನು ಮಾಡಿದ್ದಾರೆ.

ಅವರ ಕುಟುಂಬಕ್ಕೆ ಸ್ಪೇಸ್ ಅನ್ನು ಕೊಡಿ ಎಂದಿರುವ ಮೇಘನಾ ಅವರು, ರಾಘು ಸ್ಪಂದನಾ ನನ್ನ ಕುಟುಂಬವಿದ್ದಂತೆ. ನಾವಿರೋ ಇದ್ದಂತೆ ಪರಿಸ್ಥಿತಿಯಲ್ಲಿ ಇನ್ನೊಂದು ಕುಟುಂಬವನ್ನು ಹಾಗೆ ನೋಡೋಕೆ ಆಗೋದಿಲ್ಲ ಎನ್ನುವ ಮಾತನ್ನು ಹೇಳಿದ್ದು, ಅವರು ಸಹಾ ನಮ್ಮ ಕುಟುಂಬನೇ, ಇದು ನನ್ನ ಕುಟುಂಬಕ್ಕಾದ ನೋವು ಎಂದು ಮೇಘನಾ ರಾಜ್ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies