ಇಸ್ರೋ ವಿಜ್ಞಾನಿಗಳ ಪರಿಶ್ರಮ ಹಾಗೂ ಕೃಷಿಯಿಂದಾಗಿ ನಿನ್ನೆ ಚಂದ್ರಯಾನ 3 ರ ಯಶಸ್ವಿ ಉಡಾವಣೆಯಾಗಿದೆ. ಇಡೀ ದೇಶವೇ ಈ ಸಾಧನೆಯನ್ನು ಸಂಭ್ರಮಿಸುತ್ತಾ ಶುಭ ಹಾರೈಸುವಾಗಲೇ ಒಂದಷ್ಟು ಜನರಿಂದ ಒಂದು ವಿಚಾರಕ್ಕಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳು, ಟಿಪ್ಪಣಿಗಳು ಹರಿದು ಬರುತ್ತಿರುವುದು ವಾಸ್ತವವಾಗಿದೆ. ಹೌದು, ಚಂದ್ರಯಾನ 3 ಉಡಾವಣೆಗೆ ಒಂದು ದಿನ ಮೊದಲು ಇಸ್ರೋ ದ ವಿಜ್ಞಾನಿಗಳು ತಿರುಪತಿ ದೇಗುಲಕ್ಕೆ ಹೋಗಿದ್ದೇ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ನಟ, ಸಾಮಾಜಿಕ ಹೋರಾಟಗಾರನಾಗಿ ಗುರ್ತಿಸಿಕೊಂಡಿರುವ ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್ ಅಹಿಂಸಾ ಅವರು ಸಹಾ ವಿಜ್ಞಾನಿಗಳು ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಹೋದ ವಿಚಾರವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದು, ಇದು ಅಸಂಬದ್ಧ ಮತ್ತು ಬೂಟಾಟಿಕೆ ಎಂದು ಕರೆದಿದ್ದರು. ಹಾಗಾದರೆ ನಟ ಹೇಳಿದ್ದೇನು ತಿಳಿಯೋಣ ಬನ್ನಿ.
ನಮ್ಮ 3ನೇ ಚಂದ್ರಯಾನಕ್ಕೆ ಒಂದು ದಿನ ಮೊದಲು, ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಸಣ್ಣ ಗಾತ್ರದ ಪ್ರತಿರೂಪದೊಂದಿಗೆ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದು ತುಂಬಾ ಅಸಂಬದ್ಧ ಮತ್ತು ಬೂಟಾಟಿಕೆ
ಕನ್ವಿಕ್ಷನ್ ಮೂಲಕ ವೈಜ್ಞಾನಿಕ ಮನೋಧರ್ಮ ಹೊಂದಿರುವವರು ಮತ್ತು ಪದವಿಗಳಿಂದ ಕೂಡಿರುವ/ಹೊಂದಿರುವ ವಿಜ್ಞಾನಿಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸದ ಸಾಗರವಿದೆ.
ಮೊದಲ ಗುಂಪು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ; ಎರಡನೇ ಗುಂಪು ನಮ್ಮನ್ನು ಹಿಂದಕ್ಕೆ ಎಳೆಯುತ್ತದೆ ಎಂದು ಬರೆದುಕೊಂಡಿದ್ದು ನಟನ ಈ ಪೋಸ್ಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿದೆ. ಅನೇಕರು ಅವರ ನಂಬಿಕೆಯನ್ನು ನೀವೇಕೆ ಪ್ರಶ್ನೆ ಮಾಡುವಿರಿ ಎಂದರೆ ಕೆಲವರು ನಟನ ಮಾತು ಸರಿಯಾಗಿದೆ ಎಂದು ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ.