ಕನ್ನಡ ಚಿತ್ರರಂಗದ ಮಳೆ ಹುಡುಗಿ ಎಂದೇ ಹೆಸರಾದ ನಟಿ ಪೂಜಾ ಗಾಂಧಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿಚಾರಗಳಿಂದ ದೂರವೇ ಇದ್ದಾರೆ. ಮೊದಲಿನಂತೆ ಅವರಿಗೆ ಸಿನಿಮಾಗಳಲ್ಲಿ ಬೇಡಿಕೆ ಇಲ್ಲ ಎನ್ನುವುದು ಸತ್ಯ. ನಟಿಯು ಸಿನಿಮಾಗಳಲ್ಲಿ ಬೇಡಿಕೆ ಕಳೆದುಕೊಳ್ಳಲು ಹಲವು ಕಾರಣಗಳಿವೆ. ನಟಿ ತಾವೇ ಸಿನಿಮಾವೊಂದನ್ನು ನಿರ್ಮಾಣ ಸಹಾ ಮಾಡಿದರೂ ಯಶಸ್ಸು ಪಡೆಯಲಿಲ್ಲ.. ಬಿಗ್ ಬಾಸ್ ಮನೆಗೂ ಸ್ಪರ್ಧಿಯಾಗಿ ಬಂದಿದ್ದುಂಟು.
ಪೂಜಾ (Pooja Gandhi) ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಅವರು ಕನ್ನಡ ಭಾಷೆಯನ್ನು ಓದುವುದು ಮತ್ತು ಬರೆಯುವುದನ್ನು ಕಲಿತಾಗಿದೆ. ಆಗಾಗ ಅವರು ಹಂಚಿಕೊಳ್ಳುವ ಕನ್ನಡದ ಪೋಸ್ಟ್ ಗಳು, ಅವರ ಕನ್ನಡ ಪ್ರೇಮ ಕಂಡು ಸಾಕಷ್ಟು ಜನರಿಂದ ಮೆಚ್ಚುಗೆಗಳನ್ನು ಅವರು ಪಡೆದುಕೊಂಡಿದ್ದಾರೆ. ಈಗ ನಟಿ ಮತ್ತೊಮ್ಮೆ ಮತ್ತೊಂದು ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ನಟಿಪೂಜಾ ಅವರ ತಾಯಿ ಜ್ಯೋತಿ ಗಾಂಧಿಯವರು ಮಗಳಿಂದ ಸ್ಪೂರ್ತಿ ಪಡೆದು ಕನ್ನಡ ಕಲಿಯಲು ಮುಂದಾಗಿದ್ದಾರೆ. ತಾಯಿ ಬರೆದ ಕನ್ನಡದ ಸಾಲುಗಳನ್ನು ನಟಿ ಪೂಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ಜೊತೆಯಲ್ಲಿ ಒಂದಷ್ಟು ಸಾಲುಗಳನ್ನು ಸಹಾ ಅವರು ಬರೆದುಕೊಂಡಿದ್ದಾರೆ.
ಪೂಜಾ ಗಾಂಧಿ ಅವರು ತಮ್ಮ ಪೋಸ್ಟ್ ನಲ್ಲಿ,
ಕನ್ನಡದ ಅಕ್ಷರಾಭ್ಯಾಸವಿಲ್ಲದಿದ್ದರೂ, ನನ್ನ ಕನ್ನಡ ಕಲಿಕೆಯಿಂದ ಪ್ರೇರೇಪಿತರಾಗಿ ನನ್ನ ತಾಯಿ ಜ್ಯೋತಿ ಗಾಂಧಿ ಬರೆದಿರುವ ಚಂದದ ಕನ್ನಡ ಅಕ್ಷರಗಳು… ಅಮ್ಮ ಹಾಟ್ಸ್ ಆಫ್..’ ಎಂದು ಫೇಸ್‌ಬುಕ್‌ನಲ್ಲಿ (Facebook) ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆಗಳನ್ನು ನೀಡಿದ್ದಾರೆ.