ಲೋಕಸಭೆಯಲ್ಲಿ ತನ್ನ ಭಾಷಣವನ್ನು ಮುಗಿಸಿದ ನಂತರ ಅಲ್ಲಿದ್ದ ಮಹಿಳಾ ಸಂಸದರಿಗೆ ರಾಹುಲ್ ಗಾಂಧಿ ಅವರು ‘ಫ್ಲೈಯಿಂಗ್ ಕಿಸ್’ ನೀಡಿದ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಈ ವಿಚಾರವಾಗಿ ಒಂದು ಗಲಾಟೆ ನಡೆಯುತ್ತಿರುವ ವೇಳೆಯಲ್ಲಿಯೇ ಈಗ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸುತ್ತಾ ನೀಡಿರುವ ಹೇಳಿಕೆಯೊಂದು ಈಗ ಸುದ್ದಿಯಾಗಿದೆ.
ಕಾಂಗ್ರೆಸ್ ಶಾಸಕಿ ನೀತೂ ಅವರು ಮಾತನಾಡುತ್ತಾ, ರಾಹುಲ್ ಗಾಂಧಿ ಅವರಿಗೆ ಮಹಿಳೆಯರ ಕೊರತೆ ಏನಿಲ್ಲ ಅಲ್ಲದೇ ಅವರು 50 ವರ್ಷದ ಮಹಿಳೆಗೇಕೆ ಮುತ್ತು ನೀಡುತ್ತಾರೆ ಎಂದಿದ್ದಾರೆ. ನಮ್ಮ ರಾಹುಲ್ ಗಾಂಧಿಗೆ ಮಹಿಳೆಯರ ಕೊರತೆ ಇಲ್ಲ, ಅವರು ಫ್ಲೈಯಿಂಗ್ ಕಿಸ್ ಕೊಡಬೇಕಾದರೆ ಕಿರಿಯ ಮಹಿಳೆಗೆ ಕೊಡ್ತಾ ಇದ್ದರು ಅದರ ಬದಲು ವಯಸ್ಸಾದ ಮಹಿಳೆಗೆ ಫ್ಲೈ ಕಿಸ್ ಯಾಕೆ ಕೊಡ್ತಾರೆ? ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.
ನೀತು ಸಿಂಗ್ ಇಂತಹುದೊಂದು ಹೇಳಿಕೆ ನೀಡಿರುವ ವೀಡಿಯೋ ಈಗ ವೈರಲ್ ಆಗಿದೆ. ನೀತೂ ಸಿಂಗ್ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಬುಧವಾರ ಸಂಸತ್ತಿನಲ್ಲಿ 20 ಕ್ಕೂ ಹೆಚ್ಚು ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ಮಾಡುವ ಮೂಲಕ ರಾಹುಲ್ ಗಾಂಧಿ ಕೆಳಮನೆಯಲ್ಲಿ ಒಂದು ಕೋಲಾಹಲವನ್ನೇ ಸೃಷ್ಟಿಸಿದ್ದರು. ಬಿಜೆಪಿ ಸಂಸದರು ರಾಹುಲ್ ಗಾಂಧಿ ವಿರುದ್ಧ ಸ್ಪೀಕರ್ ಗೆ ಲಿಖಿತ ದೂರು ನೀಡಿದ್ದರು.