ಕನ್ನಡ ಸೇರಿದಂತೆ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿ, ಸ್ಟಾರ್ ನಟಿಯಾಗಿ ಹೆಸರನ್ನು ಮಾಡಿದ್ದ ಹಿರಿಯ ನಟಿ, ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯವು ಆರು ತಿಂಗಳ ಕಾಲ ಜೈಲು ಶಿಕ್ಷೆಯ ತೀರ್ಪನ್ನು ಪ್ರಕಟಣೆ ಮಾಡಿದೆ. ನಟಿ ಜಯಪ್ರದ ವಿರುದ್ಧ ಸರಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ನ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಲಾಗಿತ್ತು. ಈಗ ಕೋರ್ಟ್ ನ ತೀರ್ಪು ಹೊರ ಬಂದ ನಲ್ಲೆ ನಟಿ ಜಯಪ್ರದಾ ಅವರಿಗೆ ಸೋಲು ಎದುರಾಗಿದೆ.

ನಟಿ ಜಯಪ್ರದಾ ಅವರು ಭಾರತೀಯ ಸಿನಿಮಾ ರಂಗದಲ್ಲೊಂದು ದೊಡ್ಡ ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ. ಅಲ್ಲದೇ ಇವರು ಸಿನಿಮಾ ಪ್ರದರ್ಶಕಿಯೂ ಹೌದು. ತಮಿಳುನಾಡಿದ ಚೆನ್ನೈ ನಗರದಲ್ಲಿ ನಟಿಯ ಹೆಸರಿನಲ್ಲಿ ಎರಡು ಸಿನಿಮಾ ಥಿಯೇಟರ್ ಗಳಿವೆ. ಈ ಎರಡು ಚಿತ್ರ ಸಿನಿಮಾ ಥಿಯೇಟರ್ ಗಳಲ್ಲಿ ಬಹಳಷ್ಟು ಜನ ಕಾರ್ಮಿಕರು ಕೆಲಸವನ್ನು ಮಾಡುತ್ತಿದ್ದು, ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡಿದ್ದರೂ ಅದನ್ನು ಕಾರ್ಮಿಕ ಇಲಾಖೆಗೆ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ದೂರು ದಾಖಲು ಮಾಡಲಾಗಿತ್ತು.

ನಟಿಯ ಮಾಲೀಕತ್ವದ ಎರಡೂ ಸಿನಿಮಾ ಥಿಯೇಟರ್ ಗಳ ಮೇಲೆ ಈಗಾಗಲೇ ದೂರು ದಾಖಲಾಗಿದೆ. ಅಲ್ಲದೇ ನಟಿಯು ಸರ್ಕಾರಕ್ಕೆ ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಅವುಗಳನ್ನು ಜಪ್ತಿ ಸಹಾ ಮಾಡಲಾಗಿದೆ ಎನ್ನಲಾಗಿದೆ. ಆದರೆ ಕಾರ್ಮಿಕರ ಇ.ಎಸ್.ಐ ಕಡಿತ ಮಾಡಿದ್ದರೂ ಅವರು ಕಾರ್ಮಿಕ ಇಲಾಖೆಗೆ ಪಾವತಿ ಮಾಡಿರಲಿಲ್ಲ ಎನ್ನುವುದು ಅಧಿಕಾರಿಗಳು ನಟಿಯ ಮೇಲೆ ಮಾಡಿದ ಆರೋಪವಾಗಿತ್ತು.