ಜೊತೆ ಜೊತೆಯಲಿ ಸೀರಿಯಲ್ ಬೆಡಗಿ, ಕಿರುತೆರೆಯಿಂದ ಬೆಳ್ಳಿ ತೆರೆಗೆ ಹಾರಿದ ಅಂದಗಾತಿ ನಟಿ ಮೇಘಾ ಶೆಟ್ಟಿ (Megha Shetty) ಈಗ ಸಂಪೂರ್ಣವಾಗಿ ಹಿರಿತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಸೀರಿಯಲ್ ಮುಗಿದ ನಂತರ ಸಿನಿಮಾಗಳ ಕಡೆಗೆ ನಟಿ ಫೋಕಸ್ ಮಾಡಿದ್ದಾರೆ. ಅದಕ್ಕಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಸ್ಟೈಲ್ ನ ಫೋಟೋ ಶೂಟ್ ಮೂಲಕ ಗ್ಲಾಮರ್ ಡಾಲ್ ನಂತೆ ಮಿಂಚುತ್ತಿದ್ದಾರೆ. ಈಗ ಮತ್ತೊಮ್ಮೆ ಹೊಸ ಲುಕ್ ನಿಂದ ನಟಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ನಟಿ ಮೇಘಾ ಶೆಟ್ಟಿ ಕರ್ಲಿ ಹೇರ್ ಸ್ಟೈಲ್ನಲ್ಲಿ ಗ್ಲ್ಯಾಮರ್ ಗೊಂಬೆಯಾಗಿ ಕಂಗೊಳಿಸಿದ್ದಾರೆ.
ಕಪ್ಪು ಬಣ್ಣದ ಉಡುಗೆ ತೊಟ್ಟು, ಸಿಕ್ಕಾಪಟ್ಟೆ ಸ್ಟೈಲೀಶ್ ಲುಕ್ ನಲ್ಲಿ ಕ್ಯಾಮೆರಾ ಗೆ ಪೋಸ್ ನೀಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ತನ್ನ ನೋಟದಿಂದಲೇ ಫ್ಯಾನ್ಸ್ ಮೇಲೆ ಮೋಡಿ ಮಾಡುತ್ತಿದ್ದಾರೆ ಮೇಘಾ ಶೆಟ್ಟಿ. ನಟಿಯ ಈ ಹೊಸ ಗ್ಲ್ಯಾಮರ್ ಲುಕ್ ನೋಡಿ ಯುವಕರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಜೊತೆ ಜೊತೆಯಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ಜನಪ್ರಿಯತೆ ಪಡೆದ ಈ ನಟಿ ಇದೀಗ ಸ್ಯಾಂಡಲ್ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಆಪರೇಷನ್ ಲಂಡನ್ ಕೆಫೆ ಮತ್ತು ಕೈವಾ ಮೇಘಾ ಶೆಟ್ಟಿ ಅವರ ಕೈಯಲ್ಲಿ ಇರುವ ಸಿನಿಮಾಗಳಾಗಿವೆ. ಸದ್ಯಕ್ಕೆ ಸಿನಿಮಾಗಳ ಕಡೆ ಗಮನ ನೀಡಿರುವ ಈ ನಟಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.